- ತಾಲೂಕು ಪಿಡಬ್ಲ್ಯೂಡಿ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಕಚೇರಿಯಲ್ಲಿ ಜಿ ಸೇವಾ ಕೇಂದ್ರ ಉದ್ಘಾಟನೆ
ಚಾಮರಾಜನಗರ: ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದಲ್ಲಿ ಜಿ ಸೇವಾ ಕೇಂದ್ರ ಆರಂಭವಾಗಿರುವುದು ಗುತ್ತಿಗೆದಾರರಿಗೆ ಅನುಕೂಲವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಿರಣ್ ಹೇಳಿದರು.
ನಗರದ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾದ ಜಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘವು ಪ್ರತಿ ವರ್ಷವೂ ಲಾಭಾಂಶದಲ್ಲಿ ನಡೆಯುತ್ತಿರುವುದು ತುಂಬಾ ಸಂತಸವಾಗಿದೆ. ಸಂಘದ ಪ್ರಗತಿ ನೋಡಿದರೆ ಮುಂದಿನ ದಿನಗಳಲ್ಲಿ ಸಂಘವು ಚೆನ್ನಾಗಿ ಬೆಳೆಯಲಿದೆ. ನಮಗೂ ನಿಮಗೂ ಜಿಲ್ಲೆಗೆ ಸಹಕಾರವಾಗಿದೆ. ಸ್ಟ್ಯಾಂಪ್ ಪೇಪರ್ ಲಾಭಾಂಶ ತರುವ ಕಾರ್ಯವಲ್ಲ. ಎಲ್ಲರೂ ಬರಲು, ಒಂದು ಕಡೆ ಸೇರುವ ಒಂದು ಜಾಗವಾಗಿದ್ದು, ಇಲ್ಲೇ ಗುತ್ತಿಗೆದಾರರು
ಸ್ಟ್ಯಾಂಪ್ ಪೇಪರ್ ಖರೀದಿಸಿ ವ್ಯವಹಾರ ಮಾಡಲು ಅನುಕೂಲವಾಗುತ್ತದೆ. ಇದರಿಂದ ಚಾಮರಾಜನಗರದಲ್ಲಿ ವ್ಯಾಪಾರ ವಹಿವಾಟು ಜಾಸ್ತಿ ಯಾಗುತ್ತಿದ್ದು. ದಿನದಿನೇ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಸ್ಟ್ಯಾಂಪ್ ಪೇಪರ್ ಹೆಚ್ಚಾಗಿ ಬೇಕಾಗುತ್ತದೆ. ಇದು ಒಂದು ಒಳ್ಳೆಯ ಕೆಲಸವಾಗಿದೆ ಎಂದರು.
ಗುತ್ತಿಗೆದಾರರು ಯಂತ್ರೋಪಕರಣಕ್ಕಾಗಿ ಕಾಯುವ ಸ್ಥಿತಿ ಇದೆ. ಒಂದೇ ಸಮಯದಲ್ಲಿ ಕೆಲಸಗಳು ಆಗುವುದರಿಂದ ಯಂತ್ರೋಪಕರಣಗಳಿಗೆ ಡಿಮ್ಯಾಂಡ್ ಆಗುತ್ತದೆ. ಆಗಾಗಿ ಆದ್ಯತೆ ಮೇರೆಗೆ ಯಂತ್ರೋಪಕರಣ ಸಿಗುವಂತಹ ಕೆಲಸ ಆಗಬೇಕಾಗಿದೆ ಹಿಂದೆ ಇಲಾಖೆಯಿಂದ ಯಂತ್ರೋಪಕರಣಗಳನ್ನು ಗುತ್ತಿಗೆದಾರರಿಗೆ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿತ್ತು ಅದನ್ನು ಈಗ ಕಡಿಮೆ ಮಾಡಲಾಗಿದೆ. ನಿಮಗೆ ಅದು ಅವಕಾಶ ಇದೆ.ಅಂತಹ ಯಂತ್ರೋಪಕರಣಗಳ ಸೇವಾ ಕೇಂದ್ರ ಮಾಡಿದರೆ ಸಂಘಕ್ಕೂ ಗುತ್ತಿಗೆದಾರರಿಗೂ ಹೆಚ್ಚಿನ ಅನುಕೂಲ ಆಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ, ಸಂಘದ ಆಶಯದಂತೆ ಇಂದು ಜಿ ಸೇವಾ ಕೇಂದ್ರ ಆರಂಭಿಸಲಾಗಿದೆ. ಗುತ್ತಿಗೆದಾರರ ಸದಸ್ಯರು, ಸದುಪಯೋಗಪಡಿಸಿಕೊಂಡು ಸಂಘದ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಸಂಘದ ಪದಾಧಿಕಾರಿಗಳು. ಇದರ ಸದುಪಯೋಗ ಪಡಿಸಿಕೊಂಡು ಸಂಘದ ಅಭಿವೃದ್ಧಿ ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಿಆರ್‌ಇಡಿ ಇಇ ರಮೇಶಕುಮಾರ್, ಆರ್‌ಡಬ್ಲ್ಯೂಎಸ್ ಇಇ ಸಂತೋಷ್ ಕುಮಾರ್, ಪಿಡಬ್ಲ್ಯೂಡಿ ಎಇಇ ಶಾಂತಮ್ಮ, ಟಿಎ ಮಾದೇಶ್, ಕ್ಯೂಸಿ ಎಇಇ ಮಹದೇವಸ್ವಾಮಿ ಎಇಇ ರಮೇಶ್, ಎಇಗಳಾದ ಕೃಷ್ಣಮೂರ್ತಿ, ರಘು, ರೇವಣ್ಣ, ಐಶ್ವರ್ಯ, ಚಾಮರಾಜನಗರ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಉಪಾಧ್ಯಕ್ಷ ವೈ.ಪಿ.ರಾಜೇಂದ್ರಪ್ರಸಾದ್, ನಿರ್ದೇಶಕರಾದ ಎಂ.ರವಿ, ನಟರಾಜು, ಮಹದೇವಸ್ವಾಮಿ, ಶಿವಬಸವಣ್ಣ, ಎಂ.ಸಿ.ಸುರೇಂದ್ರ, ಎಂ.ಎಂ.ನಾಗರಾಜು, ನಂಜುಂಡಸ್ವಾಮಿ, ದೇವಾಜಮ್ಮಣಿ, ಸುಬ್ಬೇಗೌಡ, ಶಿವಕುಮಾರ್, ನಲ್ಲೂರು
ಮಹಾದೇವಸ್ವಾಮಿ, ದೊರೆಸ್ವಾಮಿ, ಗುತ್ತಿಗೆದಾರ ಕೆ.ಎಂ.ಮಹದೇವಸ್ವಾಮಿ, ಹೆಚ್.ಹೆಚ್.ನಾಗರಾಜು, ನಾಗೇಶ್, ಗೋವಿಂದರಾಜು, ಹನುಮಂತು, ವಕೀಲ ಮಂಜು, ಮಹದೇವಸ್ವಾಮಿ, ಸಾಧಿಕ್ ಷರೀಫ್, ಹಾಗೂ ಮೂರು ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು.
