ಚಾಮರಾಜನಗರ. ಆಗಸ್ಟ್ 29 ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮಾಡುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ ಬಿಎಸ್ ಮಹಾದೇವಸ್ವಾಮಿ ಕರೆ ನೀಡಿದರು
ನಗರ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಏರ್ಪಡಿಸಿದ ರಾಷ್ಟ್ರೀಯ ಕ್ರೀಡಾಕೂಟ ದಿನಾಚರಣೆ ಕಾರ್ಯಕ್ರಮಕ್ಕೆ ಚೆಸ್ ಆಟ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು
ಕ್ರೀಡಾ ಕ್ಷೇತ್ರದಲ್ಲಿ ಭಾರತ ದೇಶ ಉತ್ತಮ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಕರ್ನಾಟಕದ ಚೈತ್ರ ಸೇರಿದಂತೆಹಲವಾರು ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಕ್ರೀಡೆಗಳು ವ್ಯಕ್ತಿತ್ವ, ಶಿಸ್ತು ಮತ್ತು ಏಕತೆಯನ್ನು ಬೆಳೆಸುತ್ತವೆ. ಇದರ ಜೊತೆಗೆ ಹಾಕಿ ಆಟಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ , ಸಾಂಸ್ಕೃತಿಕ ಎನ್ಎಸ್ಎಸ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಭಿರುಚಿ ಗಳಿಸಿದ್ದಾರೆ ಎಂದು ತಿಳಿಸಿದರು
ಚಾಮರಾಜನಗರ ವಿಶ್ವವಿದ್ಯಾಲಯ ದೈಹಿಕ ನಿರ್ದೇಶಕ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ ಶಾಂತರಾಜು ಮಾತನಾಡಿ. ಕ್ರೀಡಾಪಟುಗಳು ಕಠಿಣ ನಿರಂತರ ಅಭ್ಯಾಸಗಳಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಜಯ ಖಚಿತ. ಕ್ರೀಡಾಪಟುಗಳು ದೈಹಿಕ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಾಲೇಜಿನ ಪ್ರಾಂಶುಪಾಲರು ಪೋಷಕರ ಮಾರ್ಗದರ್ಶನದಿಂದ ಕ್ರೀಡಾ ಚಟುವಟಿಕೆ ಭಾಗವಹಿಸಿದರೆ ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಇದರ ಜೊತೆ ಉತ್ತಮ ಕ್ರೀಡಪಟುವಾಗಿ ಹೊರಹೊಮ್ಮಿದರೆ. ಜಿಲ್ಲೆ ರಾಜ್ಯ ಹಾಗೂ ಹೊರದೇಶಗಳಲ್ಲಿ ಸರ್ಕಾರಿ ಕೆಲಸ ಜೊತೆಗೆ ವಿಶೇಷ ಸ್ಥಾನಮಾನ ಸಿಗಲಿದೆ ಎಂದು ಅಭಿಪ್ರಾಯಪಟ್ಟರು
ಇತ್ತೀಚಿಗೆ ಚಾಮರಾಜನಗರ ವಿಶ್ವವಿದ್ಯಾಲಯ ವತಿಯಿಂದ ನಡೆದ ಗುಡ್ಡಗಾಡು ಓಟದಲ್ಲಿ ಇನ್ನಿತರ ಕ್ರೀಡಾಕೂಟಗಳಲ್ಲಿ ಸರ್ಕಾರಿ ಮಹಿಳೆಯ ಪ್ರಥಮ ದರ್ಜೆಯ ಕಾಲೇಜು ಉತ್ತಮ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು
ವಿಶೇಷ ಅತಿಥಿಗಳಾ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಅಧ್ಯಕ್ಷ ಹಾಗೂ cuc ಕ್ರೀಡಾ ಸಮಿತಿ ಸದಸ್ಯ.ಜಿ ಬಂಗಾರು ಕಬಡ್ಡಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ. ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿನಿಯರು ಮುಖ್ಯಮನಿಗೆ ಬರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬರಲಾಗುತ್ತಿದೆ ಮುಂದಿನ ದಿನಗಳಲ್ಲಿ ಕ್ರೀಡಾ ಸಾಮಗ್ರಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು
ಕಾಲೇಜಿನ ಪ್ರೊಫೆಸರ್ ಶೈಲೇಶ್ ಕುಮಾರ್ ಸಿ. ರೂಪ ದೇವಿ,ಪಿ, ಡಾಕ್ಟರ್ ಪ್ರಸಾದ್ ಆರ್. ಪರಮೇಶ್ ಎಂಸಿ,IQAC ಸಂಚಾಲಕಿ ಡಾ, ಲಿಖಿತ ಎಸ್ ಅನುರಾಧ ಕಾಲೇಜಿನ ಮ್ಯಾನೇಜರ್ ಸಾಕಮ್ಮ ಪ್ರತಿಭಾವಂತ ಕ್ರೀಡಾಪಟುಗಳಾದ. ಪೂಜಾ ,ಕಾವ್ಯ. ರಶ್ಮಿ ದಿವ್ಯಾ ಕೀರ್ತನ. ಸೌಂದರ್ಯ. ಮಂಜಲಿ. ಮಾದೇವಮ್ಮ. ಸೇರಿದಂತೆ ವಿದ್ಯಾರ್ಥಿನಿಯರು ಕಾಲೇಜಿನ ಎಲ್ಲಾ ಪ್ರೊಫೆಸರ್ ಗಳು. ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳು ಹಾಜರಿದ್ದರು
