ಪತ್ಯೇಕ್ಷ ಎಸ್ಟಿ ಹಿತರಕ್ಷಣಾ ಸಮಿತಿ ಸಭೆ ಕರೆಯುವಂತೆ ಒತ್ತಾಯಿಸಿ ಎಡಿಸಿಗೆ ಮನವಿ

ಚಾಮರಾಜನಗರ: ಪತ್ಯೇಕವಾಗಿ ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಯನ್ನು ಕರೆಯುವಂತೆ ಒತ್ತಾಯಿಸಿ ಜಿಲ್ಲಾ ನಾಯಕ ಜನಾಂಗದ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮೂಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎರಡು ಸಮುದಾಯಗಳ ಸಭೆಯನ್ನು ಒಟ್ಟಿಗೆ ಕರೆಯುವುದ್ದರಿಂದ  ನಮ್ಮ ಸಮುದಾಯ ವಿಷಯಗಳ ಸಮಸ್ಯೆಗಳು, ಕುಂದುಕೊರತೆಗಳನ್ನು ಚರ್ಚಿಸಲು ಕಾಲಾವಕಾಶ ಇರುವುದಿಲ್ಲ. ಬರೀ ಗೊಂದಲದಲ್ಲಿ ಸಭೆ ಮುಗಿಯುತ್ತದೆ. ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಆಗಾಗಿ ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಯನ್ನು ಪತ್ಯೇಕವಾಗಿ ಕರೆಯುವಂತೆ ಜಿಲ್ಲಾ ನಾಯಕ ಜನಾಂಗದ ಹಿತರಕ್ಷಣಾ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಬುಲೆಟ್ ಚಂದ್ರು, ಕೃಷ್ಣನಾಯಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಚಂದ್ರು ಹರದನಹಳ್ಳಿ, ಶಕುಂತಲಾ, ಸುಬ್ರಹ್ಮಣ್ಯ, ಗಣೇಶ್, ಬಂಗಾರನಾಯಕ ಕಿಲಗೆರೆ, ಜಯಕುಮಾರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *