ಜೂ. 6 ರಂದು ನಗರದಲ್ಲಿ  ನಮ್ಮಚಾಮರಾಜನಗರ ಸಾಂಸ್ಕೃತಿಕ ಹಬ್ಬ:  ಎಚ್.ಎಂ.ಶಿವಣ್ಣ

ಚಾಮರಾಜನಗರ:ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜೂ.6 ರಂದು ನಗರದಲ್ಲಿ ನಮ್ಮ ಚಾಮರಾಜನಗರ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಎಚ್.ಎಂ.ಶಿವಣ್ಣ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಮಧ್ಯಾಹ್ನ 2 ಗಂಟೆಗೆ  ನಗರದ ವರನಟ ಡಾ.ರಾಜ್ ಕುಮಾ‌ರ್ ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ,ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಚುಡಾ ಅಧ್ಯಕ್ಷ ಮಹಮ್ಮದ್ ಆಸ್ಕರ್ ಉದ್ಘಾಟಿಸಲಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಶ್ರೀರೂಪ ಪುಷ್ಪಾರ್ಚನೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಎಡಿಸಿ ಜವರೇಗೌಡ, ಡಿವೈಎಸ್ಪಿ ಸ್ನೇಹರಾಜ್ , ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಸಹಾಯಕ ನಿರ್ದೇಶಕ ಬಿ.ಎಸ್.ರಾಜು, ಉದ್ಯಮಿ ಶ್ರೀ ನಿಧಿ ಕುದರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಯಳಂದೂರಿನ ಅಶ್ವಿನಿ ಆಸ್ಪತ್ರೆಯ ಡಾ.ರಮೇಶ್ ಉಡುಪ ಹಾಗೂ ಡಾ.ಶಶಿಕಲಾ ರಮೇಶ್ ಅವರಿಗೆ ಗಡಿನಾಡ ವೈದ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಕಲೆ ನಟರಾಜು
ವೇದಿಕೆ ಉಪಾಧ್ಯಕ್ಷೆ ವಸಂತಮ್ಮ,  ಸದಸ್ಯ ರಾದ ಲಿಂಗರಾಜು, ಕೆಇಬಿ ಶಿವಶಂಕರ್ ಹಾಜರಿದ್ದರು.

Leave a Reply

Your email address will not be published. Required fields are marked *