ಚಾಮರಾಜನಗರ: ಚಾಮರಾಜನಗರ ದಸರಾ ಅಂಗವಾಗಿ ಅಕ್ಟೋಬರ್ 18ರಂದು ನಗರದಲ್ಲಿ ದಸರಾ ಮ್ಯಾರಥಾನ್ ಓಟ ಮತ್ತು ಸ್ಕೇಟಿಂಗ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 6.30 ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಮ್ಯಾರಥಾನ್ ಆರಂಭಗೊಂಡು ಪಚ್ಚಪ್ಪ ವೃತ್ತ, ಜಿಲ್ಲಾ ಆಸ್ಪತ್ರೆ, ಜಿಲ್ಲಾಡಳಿತ ಭವನದ ರಸ್ತೆ, ಡಿವೈಎಸ್ಪಿ ಕಚೇರಿಯಿಂದ ರೋಮನ್ ಕ್ಯಾಥೋಲಿಕ್ ಚರ್ಚ್, ರಾಮಸಮುದ್ರ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯಿಂದ ಹಿಂತಿರುಗಿ ವರ್ತಕರ ಭವನದ ರಸ್ತೆ, ನ್ಯಾಯಾಲಯ ರಸ್ತೆ, ಡಾ.ಬಿ.ಆರ್ ಅಂಬೇಡ್ಕರ್ ಭವನ ಮಾರ್ಗವಾಗಿ ಪ್ರವಾಸಿಮಂದಿರದಲ್ಲಿ (ಪರಿವೀಕ್ಷಣ ಮಂದಿರ) ಮುಕ್ತಾಯಗೊಳ್ಳಲಿದೆ.
ಮ್ಯಾರಥಾನ್ ನಲ್ಲಿ ಜಿಲ್ಲೆಯ ಎಲ್ಲಾ ಯುವಕ, ಯುವತಿಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9448999332, 9880664347 ಸಂಪರ್ಕಿಸುವಂತೆ ದಸರಾ ಸಮಿತಿಯ ಮ್ಯಾರಥಾನ್ ಕಾರ್ಯಕ್ರಮಗಳ ಕಾರ್ಯಧ್ಯಕ್ಷರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.