ಚಾಮರಾಜನಗರ ದಸರಾ : ಅಕ್ಟೋಬರ್ 19ರಂದು ನಗರದಲ್ಲಿ ದಸರಾ ಪಾರಂಪರಿಕ ನಡಿಗೆ

ಚಾಮರಾಜನಗರ: ಚಾಮರಾಜನಗರ ದಸರಾ ಪ್ರಯುಕ್ತ ಅಕ್ಟೋಬರ್ 19 ರಂದು ನಗರದಲ್ಲಿ ಪಾರಂಪರಿಕೆ ನಡಿಗೆ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 6.30 ಗಂಟೆಗೆ ದಸರಾ ಪಾರಂಪರಿಕ ನಡಿಗೆಯು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು ಚಾಮರಾಜ ಒಡೆಯರ್ ರವರ ಜನನ ಮಂಟಪ, ಜೈನರ ಬಸದಿ, ವೀರಭದ್ರಸ್ವಾಮಿ ದೇವಸ್ಥಾನ ಹತ್ತಿರದ ಮಾರ್ಗವಾಗಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮಾರ್ಗದಿಂದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.

ಈ ಕಾರ್ಯಕ್ರಮಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪುರುಷರು ಮತ್ತು ಮಹಿಳೆಯರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸದಸ್ಯರು, ಅಧಿಕಾರಿಗಳು ಭಾಗವಹಿಸಬಹುದು. ಪಾರಂಪರಿಕೆ ನಡಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸುವಂತೆ ದಸರಾ ಸಮಿತಿಯ ಪಾರಂಪರಿಕೆ ನಡಿಗೆ ಕಾರ್ಯಕ್ರಮಗಳ ಕಾರ್ಯಧ್ಯಕ್ಷರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *