ಚಾಮರಾಜನಗರ, ಅಕ್ಟೋಬರ್ 14 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ ಹಾಗೂ ಚಾಮರಾಜನಗರ ದಸರಾ ಮಹೋತ್ಸವ ಸಮಿತಿ ವತಿಯಿಂದ ಚಾಮರಾಜನಗರ ದಸರಾ ಮಹೋತ್ಸವ 2026ರ ಅಂಗವಾಗಿ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಅಕ್ಟೋಬರ್ 17 ರಂದು ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಗೆ ಒಂದು ಗಂಟೆ ಕಾಲಾವಕಾಶ ವಿರುತ್ತದೆ. ಸ್ಪರ್ಧೆಗೆ ರಂಗೋಲಿ ಹಾಗೂ ಬಣ್ಣವನ್ನು ಮಾತ್ರ ಉಪಯೋಗಿಸಬೇಕು. ಇತರೆ ಪರಿಕರಗಳು ಅಂದರೆ ಉಪ್ಪು, ಹೂವು, ಧಾನ್ಯಗಳು ಇತ್ಯಾದಿ ಬಳಸುವಂತಿಲ್ಲ. ಬಣ್ಣ, ರಂಗೋಲಿ ಹಾಗೂ ಬೇಕಾಗುವ ಇತರೆ ಪದಾರ್ಥಗಳನ್ನು ಭಾಗವಹಿಸುವವರೇ ತರಬೇಕು. ಸ್ಪರ್ಧೆಗೆ ಭಾಗವಹಿಸುವವರು 30 ನಿಮಿಷ ಮೊದಲೆ ಸ್ಥಳಕ್ಕೆ ಆಗಮಿಸಿರಬೇಕು. ಸ್ಪರ್ಧೆಗೆ ಮುಂಚಿತವಾಗಿ ನೋಂದಣಿ ಮಾಡಿಕೊಂಡಿರಬೇಕು.
ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಲೆಮನ್ ಇನ್ ದಿ ಸ್ಪೂನ್, ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಮ್ಯೂಸಿಕಲ್ ಚೇರ್ ಹಾಗೂ ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಮಡಕೆ ಒಡೆಯುವ ಸ್ಪರ್ಧೆ ನಡೆಯಲಿದೆ.
ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟಿರಬೇಕು. ಭಾಗವಹಿಸುವವರಿಗೆ ಯಾವುದೇ ಭತ್ಯೆ ಇರುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಸಕ್ತಿಯುಳ್ಳ ಮಹಿಳೆಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೊ.ಸಂ 8618242166, 7019069546 ಗೆ ಕರೆ ಮಾಡುವ ಮೂಲಕ ಅಕ್ಟೋಬರ್ 16ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸ್ಪರ್ಧೆಗಳಿಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ