ಮೈಸೂರಿನಲ್ಲಿ ಎಸ್‌.ಜಾನಕಿ ಸ್ಮಾರಕ, ಸಂಗೀತ ಶಾಲೆ ತೆರೆಯಲು : ಸಿ.ಎಂ.ನರಸಿಂಹಮೂರ್ತಿ ಒತ್ತಾಯ

  • ಸಂಗೀತದ ಕೋಗಿಲೆ, ಗಾಯಕಿ ಎಸ್.ಜಾನಕಿ ನಿಧನಕ್ಕೆ ಭಾವಪೂರ್ಣ ಶ್ರದ್ದಾಂಜಲಿ

ಚಾಮರಾಜನಗರ : ಸಂಗೀತದ ಸರಸ್ವತಿ, ಭಾರತದ ಹೆಮ್ಮೆಯ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ನಗರದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ನಗರದ ಭುವನೇಶ್ವರಿ ವೃತ್ತದಲ್ಲಿ ಎಸ್.ಜಾನಕಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ಒಂದು ನಿಮಿಷ ಮೌನಾಚರಣೆ ಮಾಡಿ
ಗೌರವ ಸೂಚಿಸಲಾಯಿತು.

ಅಂತಾರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ  ಪುಷ್ಷಾರ್ಚನೆ ಮಾಡಿ ಮಾತನಾಡಿ,  ಎಸ್ .ಜಾನಕಿ ಅವರ ಹಾಡುಗಳು ಸೂರ್ಯ, ಚಂದ್ರ ಇರುವ ತನಕ ಚಿರಸ್ಥಾಯಿಯಾಗಿರುತ್ತದೆ. ಸರ್ಕಾರ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಿಸಲಿ, ಅವರ ಹೆಸರಿನಲ್ಲಿ ಸಂಗೀತ ಶಾಲೆ ತೆರೆದು ಅವರ ಹೆಸರ ಚಿರಸ್ಮರಣೀಯಾಗಿಸುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಮುಖಂಡ ಆಲೂರುಮಲ್ಲು ಮಾತನಾಡಿ,  ಎಸ್.ಜಾರಕಿ ಅವರ ಹಾಡುಗಳು ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದರು. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟು ಉಂಟಾಗಿದೆ ಎಂದರು.

ಜಿಲ್ಲಾ ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಬಸವನಪುರ ರಾಜಶೇಖರ ಮಾತನಾಡಿ, ಗಾಯಕಿ ಎಸ್. ಜಾನಕಿ ಅವರು ಸುಮಾರು 17 ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದು ದೇಶದಲ್ಲಿ ಛಾಪುಮೂಡಿಸಿದರು. ಅವರ ಆತ್ಮಕ್ಕೆ ಶಾಂತಿ ನೆಲಸಲಿ ಎಂದು ಪ್ರಾರ್ಥಿಸಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಂಗಲದ ಹೊಸೂರು ಶಿವಣ್ಣ,  ಉಪಾಧ್ಯಕ್ಷ ಬಂಗಾರು, ಖಜಾಂಚಿ ಸಿ.ಡಿ.ಪ್ರಕಾಶ್, ಕೆಸ್ತೂರು ಮರಪ್ಪ, ಪಣ್ಯದಹುಂಡಿ ರಾಜು, ರಾಮಸಮುದ್ರ ಸುಂದರ್,  ಎಲ್ಐಸಿ ಸಿದ್ದರಾಜು, ರಾಜೇಶ್,ಕರವೇ ಅಧ್ಯಕ್ಷ ರಾಘವೇಂದ್ರ,  ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕೂಸಣ್ಣ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *