ಬರಪಿಡಿತ ಪ್ರದೇಶದ ರೈತರ ಸಾಲ ಮನ್ನಾಕ್ಕೆ ಒತ್ತಾಯ

  • ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯ

ಚಾಮರಾಜನಗರ: ರಾಜ್ಯದಲ್ಲಿ ತೀವ್ರ ಬರ ಪೀಡಿತ ಪ್ರದೇಶಗಳೆಂದು ಘೋಷಣೆಯಾಗಿರುವ ವ್ಯಾಪ್ತಿಯ ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ಮನ್ನಾ ಮಾಡಬೇಕು. ಹಾಗೂ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬರಪಿಡಿತ ಪ್ರದೇಶದ ವ್ಯಾಪ್ತಿಯ ರೈತರು ಪಡೆದಿರುವ ಬೆಳೆ ಸಾಲಗಳನ್ನು ಸಹ ಮನ್ನಾ ಮಾಡಿ ಬರದಿಂದಿರ ತತ್ತರಿಸಿರುವ ರೈತರ ರಕ್ಷಣೆಗೆ ಮುಂದಾಗಬೇಕೆAದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದ್ದಾರೆ.

ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಮಾನದಂಡ ವೈಜ್ಞಾನಿಕವಾಗಿ ಮತ್ತು ಪ್ರಸ್ತುತ ಸನ್ನಿವೇಶಕ್ಕೆ ಅನುಕೂಲವಾದ ರೀತಿಯಲ್ಲಿ ಮಾರ್ಪಾಡು ಮಾಡಬೇಕು. ಅದನ್ನು ಬಿಟ್ಟು ಕೇವಲ ರೈತರಿಗೆ ಇನ್ಪುಟ್ ಸಬ್ಸಿಡಿ ಎಂದು ಎರಡುವರೆ ಸಾವಿರ ರೂಪಾಯಿ ನೀಡುವುದು ವೈಜ್ಞಾನಿಕವಾಗಿದ್ದು ರದು ಮಾಡಿ ರೈತರ ಸಾಲ ಮನ್ನಾ ಮಾಡಬೇಕು ರಾಜ್ಯದಲ್ಲಿ ಇರುವಂತಹ ಮುಖ್ಯಮಂತ್ರಿಯಿAದ ಶಾಸಕರ ತನಕ ಮತ್ತು ರಾಜ್ಯದಿಂದ ಆಯ್ಕೆಯಾಗಿರುವ ಲೋಕಸಭಾ ಸದಸ್ಯರು ಎಲ್ಲರೂ ಸಹ ತಮ್ಮ ಸಂಬಳ ಸಾರಿಗೆ ವೈಭವಿತ ಜೀವನವನ್ನು ಭರದ ನಡುವೆ ನಡೆಸುತ್ತಿದ್ದಾರೆ ಬರದ ಅಧ್ಯಯನದ ಖರ್ಚನ್ನು ಸಹ ಸರ್ಕಾರದಿಂದ ಪಡೆಯುತ್ತಾರೆ ಮೂರು ದಿನದ ಅಧಿವೇಶನಕ್ಕೆ ಕೋಟಿ ಕೋಟಿ ರೂಪಾಯಿಯನ್ನು ಸಹ ಸಂಬಳ ಸಾರಿಗೆ ಪಡೆದುಕೊಂಡು ರೈತರಿಗೆ ಪರಿಹಾರ ಕೊಡುವಲ್ಲಿ ಕೇಂದ್ರದ ಮೇಲೆ ರಾಜ್ಯ ರಾಜದ ಮೇಲೆ ಕೇಂದ್ರ ಕೈ ತೋರಿಸಿಕೊಂಡು ಕೈಕಟ್ಟಿ ಕುಳಿತಿದ್ದಾರೆ ಆದರೆ ಬರದ ಪಟ್ಟಿಯನ್ನು ರೈತನ ಬೆನ್ನಿಗೆ ಕಟ್ಟಿ ಬರ ದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವ ಆಡಳಿತ ಮತ್ತು ವಿರೋಧ ಪಕ್ಷಗಳು ಈಗಲಾದರೂ ರೈತನ ಅನ್ನವನ್ನು ತಿನ್ನುತ್ತಿದ್ದರೆ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಿ ವೈಜ್ಞಾನಿಕ ಬೆಳೆ ನಷ್ಟ ನೀಡಲು ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

ಬರಪೀಡಿತ ಘೋಷಣೆ ದಿನಾಂಕದಿAದ ರಾಜ್ಯದಲ್ಲಿ ಸಂಪೂರ್ಣ ಬರ ನಿಲ್ಲುವ ತನಕ ಯಾವುದೇ ಮಂತ್ರಿ ಶಾಸಕ ಲೋಕಸಭಾ ಸದಸ್ಯರು ಬರ ನಿರ್ವಹಣೆಗೆ ಹಣವನ್ನು ನೀಡಿ ಇವರಿಗೆ ಇರುವ ವಿಶೇಷ ಸೌಲಭ್ಯದ ಯಾವುದೇ ಸೌಲಭ್ಯಗಳನ್ನು ಪಡೆಯುವುದನ್ನು ಕೈಬಿಡಬೇಕು ಆಗ ಚುನಾಯಿತ ಪ್ರತಿನಿಧಿಗಳು ರೈತ ಪರ ಇದ್ದಾರೆ ಎಂದು ತಿಳಿದುಕೊಳ್ಳಬಹುದು ಎಂದು ಭಾಗ್ಯರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಕಬಿನಿ ಮತ್ತು ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಬೆಳೆ ಮಾಡಲು ನೀರು ನೀಡಲು ವಿಫಲವಾಗಿರುವ ಕಾರಣ ತಕ್ಷಣ ಪ್ರತಿ ಎಕರೆಗೆ 50,000 ಬೆಳೆ ನಷ್ಟ ಘೋಷಣೆ ಮಾಡಬೇಕು. ತಮಿಳುನಾಡಿಗೆ ನೀರು ಬಿಟ್ಟು ಕಬಿನಿ ವ್ಯಾಪ್ತಿಯ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಆದ್ದರಿಂದ ತಕ್ಷಣ ಕಬಿನಿ ಇಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ50 ರೂಪಾಯಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 8 ಕೋಟಿ ಅಷ್ಟು ರೈತರಿಗೆ ಹಣವನ್ನು ತಕ್ಷಣ ಕೊಡಿಸಬೇಕು. ಸಕ್ಕರೆ ಬೆಲೆ ಜಾಸ್ತಿ ಆಗಿರುವುದರಿಂದ ಪ್ರತಿ ಟನ್ ಕಬ್ಬಿಗೆ 6,000 ನಿಗದಿ ಪಡಿಸಬೇಕು. ಕಬ್ಬು ಬೆಳೆಗಾರರಿಗೆ ಉತ್ತರ ದಕ್ಷಿಣ ಎಂಬ ತಾರಾತಮ್ಯವಿಲ್ಲದೆ ಕಟಾವು ಸಾಗಾಣಿಕೆಯನ್ನು ಕಾರ್ಖಾನೆ ಮಾಲೀಕರೇ ಬರಿಸಬೇಕು. ಕಬ್ಬು ಖರೀದಿ ಮಂಡಳಿಯನ್ನು ತಕ್ಷಣ ಪುನರ್ ರಚನೆ ಆಗಬೇಕು ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋ ಶಾಲೆ ಮತ್ತು ಮೇವು ಪೂರೈಕೆ ಕೇಂದ್ರಗಳನ್ನು ಸರ್ಕಾರ ಆರಂಭಿಸಬೇಕು. ಬರದಿಂದ ನೊಂದಿರುವ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ ಹೆಚ್ಚುವರಿ 10 ರೂಪಾಯಿ ಘೋಷಣೆ ಮಾಡಬೇಕು ಜಿಲ್ಲೆಯ ಹೊಸಕೆರೆಗಳಿಗೆ ನೀರು ತುಂಬಿಸಲು ಕ್ರಿಯಾಯೋಜನೆ ತಯಾರು ಮಾಡಿ ಅಂತರ್ಜಲ ವೃದ್ಧಿ ಹಾಗೂ ಜಾನುವಾರಗಳಿಗೆ ಕುಡಿಯೋ ನೀರಿಗೆ ಅನುಕೂಲ ಮಾಡಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕು , ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಕಟ್ಟೆಗಳಿಗೆ ನೀರು ತುಂಬಿಸಲ ಜಾರಿಯಾಗಿರುವ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಲು ಸೂಚಿಸಬೇಕು. ಜಿಲ್ಲೆಯ ಮಾನವ ಮತ್ತು ಪ್ರಾಣಿ ಸಂಘರ್ಷದ ತಡೆಗೆ ವಿಶೇಷ ಯೋಜನೆಗಳನ್ನು ರೂಪಿಸಿ ವೈಜ್ಞಾನಿಕ ರೀತಿಯಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಯಲು ವಿಶೇಷ ಕಾರ್ಯಪಡೆಯನ್ನು ರಚಿಸಬೇಕು ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳ ತಡೆಗೆ ಇರುವ ಯೋಜನೆಗೆ ಹೆಚ್ಚುವರಿ ಹಣವನ್ನು ವಿಶೇಷವಾಗಿ ನೀಡಬೇಕು. ಕೃಷಿ ಪಂಪ್ಸೆಟ್ಟುಗಳಿಗೆ 7:00 ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ತಕ್ಷಣ ರಾಜ್ಯಮತ್ತು ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಿ ಈ ಮೇಲ್ಕಂಡ ಹಕ್ಕುಗಳನ್ನು ಜಾರಿಗೆ ತರಲು ಕ್ರಮ ವಹಿಸಬೇಕು ಇಲ್ಲವಾದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್. ಮಲಿಯೂರು ಗೌಡಕೆ ಸೋಮಣ್ಣ. ಅಂಗಡಿ ಸತೀಶ್, ಅರಳಿ ಕಟ್ಟೆ ಪ್ರಭುಸ್ವಾಮಿ. ಕಿಲಿಪುರ ಶ್ರೀಕಂಠ ನರಸುಮಂಗಲ ನಾಗುಮಲ್ಲಪ್ಪ ಹೊನ್ನೇ ಗೌಡನಹಳ್ಳಿ ಮಹೇಶ್. ಕಾಳಪ್ಪ ಕ್ಯಾನಂದಳ್ಳಿ ಬಸವರಾಜು ನಾಗರಾಜಪ್ಪ. ಉಮೇಶ್ ಶಿವನಂಜಪ್ಪ. ಪ್ರಕಾಶ್. ಮುಕುಡಹಳ್ಳಿ ಪುಟ್ಟ ಮಲ್ಲೆಗೌಡ, ಉರ್ದಹಳ್ಳಿ ರಾಮಣ್ಣ ಮತ್ತಿತರರಿದ್ದರು.

Leave a Reply

Your email address will not be published. Required fields are marked *