ಪಿ.ಮಹದೇವಸ್ವಾಮಿ ನಿಧನಕ್ಕೆ ಡಿಯುಡಬ್ಲ್ಯೂಜೆ ಶ್ರದ್ಧಾಂಜಲಿ

ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಗೊರುಕನ ದಿನಪತ್ರಿಕೆಯ ಪುಟ ವಿನ್ಯಾಸಕ ಪಿ.ಮರಿಸ್ವಾಮಿ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ  ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

   ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪಿ.ಮಹದೇವಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಆರ್.ಎನ್, ಸಿದ್ದಲಿಂಗಸ್ವಾಮಿ ಮಾತನಾಡಿ,  ನಮ್ಮ ಸಂಘದ ಸದಸ್ಯರಾಗಿದ್ದ
ಪಿ.ಮಹದೇವಸ್ವಾಮಿ ಅವರು ಕಳೆದ 12 ವರ್ಷಗಳಿಂದಲೂ ಗೊರುಕನ ಪತ್ರಿಕೆಯಲ್ಲಿ ಪುಟ ವಿನ್ಯಾಸಕರಾಗಿ ಕರ್ತವ್ಯ
ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದ್ದು, ನಮಗೆ ಅತೀವ ದುಃಖವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತನು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಆಶಿಸಿದರು.
ಸಂಘದ ವತಿಯಿಂದ ಮೃತ ಕುಟುಂಬಕ್ಕೆ ಧನಸಹಾಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ಪತ್ರಕರ್ತರಾದ ಎಸ್.ಎಂ.ನಂದೀಶ್, ಫಾಲಲೋಚನಾ ಆರಾಧ್ಯ, ಲಿಂಗಪ್ಪ, ಬದನಗುಪ್ಪೆ ಮಲ್ಲಣ್ಣ, ಕಾಗಲವಾಡಿ ಬಸವಣ್ಣ ಚಂದ್ರಶೇಖರ್, ಹೊಮ್ಮ ನಂಜುಂಡನಾಯಕ, ವಿಜಯ್, ಬಸವರಾಜು, ರವಿಕುಮಾರ್, ಮಂಜುಕುಮಾರ್, ಚರಣ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *