ಜೂ.9 ರಂದು ನಗರದಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ : ಡಾ.ನಾಗಾರ್ಜುನ್

 ಚಾಮರಾಜನಗರ : ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಬೆಂಗಳೂರು(ಸಿಎಸ್ಆರ್ ನಿಧಿ)
ವತಿಯಿಂದ  ನಗರದಲ್ಲಿ ಜೂ.9 ರಂದು
ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಮಾಜಿ ಗೌರ್ನರ ಡಾ.ನಾಗಾರ್ಜನ್ ತಿಳಿಸಿದರು.
   ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು  ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಲಿದ್ದಾರೆ. ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ ಪಿ.ಕೆ.ರಾಮಕೃಷ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀರೂಪ, ಜಿ.ಪಂ.ಸಿಇಓ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು,
ನಾಮಿನಿ ಜಿಲ್ಲಾ ಗೌರ್ನರ್ ಯಶಸ್ವಿ ಸೋಮಶೇಖರ ಭಾಗವಹಿಸಲಿದ್ದಾರೆ. ರೋಟರಿ ಅಧ್ಯಕ್ಷ ಬಿ.ಚಂದ್ರಶೇಖರ್ ಉಪಸ್ಥಿತಿ ವಹಿಸಲಿದ್ದಾರೆ ಎಂದರು.
   ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಜನರಿಗೆ ನೆರವಾಗುವ ಕಾರ್ಯಕ್ರಮ ಮಾಡುತ್ತಿದೆ.
ನಮ್ಮ ಸಂಸ್ಥೆಯ ಅಧ್ಯಕ್ಷರಾದ ಕಾಗಲವಾಡಿಚಂದ್ರು ಅವರ ಅಧಿಕಾರ ವಹಿಸಿಕೊಂಡ ಸಂದರ್ಭದಿಂದಲ್ಲೇ ಕೈ-ಕಾಲು ಕಳೆದುಕೊಂಡಿರುವಂತಹರಿಗೆ ಕೃತಕ ಕೈ-ಕಾಲು ಶಿಬಿರವನ್ನು ಮಾಡಬೇಕು ಎಂಬ ಆಶಯದಂತೆ ಈ ಮಹತ್ವ ಆಕಾಂಕ್ಷೆ  ಪೂರೈಸುವ ಹಂತಕ್ಕೆ ಬಂದಿದೆ ಎಂದರು.
ಜಿಲ್ಲಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯಲ್ಲಿ 30 ರಿಂದ 40 ಮಂದಿ ಸಿಗಬಹುದು ಎಂದು ತಿಳಿದುಕೊಂಡಿದ್ದು ಆದರೆ 115 ಮಂದಿ ನೊಂದಾಯಿಸಿಕೊಂಡು ಅವರ ಕೃತಕ, ಕಾಲು ಅಳತೆ ತೆಗೆದುಕೊಳ್ಳಲಾಗಿದೆ ಅದರಲ್ಲಿ ಕಾಲು ಜೋಡಣೆ 44 ಜನರು, ತೊಡೆಯ ಹತ್ತಿರವೇ ಕಾಲು ಕಟ್ ಆಗಿರುವವರು 36 ಜನರು, ಕೈ 15 ಜನರು, ಪೂರ್ತಿ ತೊಡೆ ಜಾಯಿಂಟ್ 6 ಜನ ಒಟ್ಟು101 ವಿಶೇಷ ಚೇತನರಿಗೆ ಜೋಡಣೆ ಮಾಡಲಾಗುವುದು. ಇದರ ವೆಚ್ಚ ಸುಮಾರು 12 ಲಕ್ಷದಿಂದ 13 ಲಕ್ಷ ತನಕ ವೆಚ್ಚ ಆಗುತ್ತದೆ. ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಅವರನ್ನು ಸಹಾಯ ಮಾಡುವಂತೆ ರೋಟರಿ ಸಂಸ್ಥೆ ಮನವಿ ಮಾಡಿಕೊಂಡಾಗ ಎಂಎಸ್‌ಐಎಲ್ ಸಿಎಸ್‌ಆ‌ರ್ ‌ ಅನುದಾನದಲ್ಲಿ 8 ಲಕ್ಷ ರೂ.ನೀಡಿದ್ದಾರೆ ಉಳಿದ ಅನುದಾನವನ್ನು ರೋಟರಿ ಭರಿಸಿಕೊಳ್ಳುತ್ತದೆ ಎಂದರು.
   ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ,  ರೋಟರಿ ಸಂಸ್ಥೆಯು ಸುಮಾರು 56 ವರ್ಷಗಳಿಂದಲೂ ಸೇವಾ ಕಾರ್ಯಕ್ರಮ ‌ಮಾಡಿಕೊಂಡು ಬರುತ್ತಿದ್ದು,
ನನ್ನ ಒಂದು ವರ್ಷದ ಅವಧಿಯ 300ನೇ ಕಾರ್ಯಕ್ರಮವಾಗಿ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ಆಯೋಜಿಸಲಾಗಿದೆ ಎಂದರು. ಅಳತೆ ಮಾಡಿಸಿರುವ ವಿಶೇಷಚೇತನರು ಜೂ.9 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಗಮಿಸಿದ ಕೃತಕ,ಕೈ-ಕಾಲು ಜೋಡಣೆ ಮಾಡಿಸಿಕೊಳ್ಳುತ್ತೇನೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಮುಂದಿನ ಸಾಲಿನ ಅಧ್ಯಕ್ಷ ಅಬ್ದುಲ್ ಅಜೀಜ್ ದಿನಾ, ಕಾರ್ಯದರ್ಶಿ ಜಿ. ಅಂಕಶೆಟ್ಟಿ, ಮಾಜಿ ಅಧ್ಯಕ್ಷ ಕಮಲ್ ರಾಜ್, ನಿರ್ದೇಶಕರಾದ ರಾಮು, ರತ್ನ ಮ್ಮ ಬಸವರಾಜು ಹಾಜರಿದ್ದರು.

Leave a Reply

Your email address will not be published. Required fields are marked *