ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಒಳಾಂಗಣದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ : ಜಿಲ್ಲಾಧಿಕಾರಿಗೆ ಮನವಿ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಒಳಾಂಗಣದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಕೂಡಲೇ ಬ್ಯಾಡ್ಮಿಂಟನ್ ಆಟ ಆಡಲು ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಲಾಯಿತು.
2 ತಿಂಗಳಿನಿಂದ ಡಾ.ಬಿ.ಆರ್.ಅಂಬೇಡ್ಕ‌ರ್
ಕ್ರೀಡಾಂಗಣದ ಒಳಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ತೀರಾ ಮಂದಗತಿಯಲ್ಲಿ ನಡೆಯುತ್ತಿದ್ದು, ಇದರಿಂದ ಆಟಗಾರರಿಗೆ ತುಂಬಾ ತೊಂದರೆಯಾಗತ್ತಿದೆ. ಆದುದರಿಂದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ
ತಕ್ಷಣವೇ ಆಟಗಾರರಿಗೆ ಆಟ ಆಡಲು ಅನುವು ಮಾಡಿಕೊಡಬೇಕು.
ಒಳಾಂಗಣದ ಒಳಗಡೆ ಗೋಡೆಗಳಿಗೆ ಬಣ್ಣ ಹೊಡೆಸುವುದು,,ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಿಸುವುದು, ಬ್ಯಾಡ್ಮಿಂಟನ್ ಅಂಕಣದ ಸುತ್ತಾ ಗ್ರೀನ್ ಮ್ಯಾಟ್ ಅಳವಡಿಸುವುದು, ಆಟಗಾರರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಜಿಲ್ಲಾ ಕ್ರೀಡಾಂಗಣ ಸಲಹಾ ಸಮಿತಿ ಸದಸ್ಯ ಶ್ರೀನಿವಾಸಪ್ರಸಾದ್,  ಷಟಲ್ ಬ್ಯಾಂಡ್ಮಿ
ಟನ್ ಆಟಗಾರರಾದ ಶ್ರೀ ನಿಧಿಕುದರ್ ಒತ್ತಾಯಿಸಿದರು.
ಷಟಲ್ ಬ್ಯಾಡ್ಮಿಂಟನ್ ಆಟಗಾರರಾದ
ಸಿ.ಎಸ್. ಅಕ್ಷಯ್, ಮಲ್ಲಪ್ಪ, ಕಿರಣ್, ಡಾ.ಪ್ರವೀಣ್, ವಿಜಯ ಕುಮಾರ್, ಲೋಕೇಶ್, ಅರುಣ್, ಪರಶಿವಮೂರ್ತಿ,  ಭರತ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *