ಮೋದಿಯವರ ಆಶಯದಂತೆ ಪ್ರತಿಯೊಬ್ಬರೂ ಒಂದು ಗಿಡನೆಡಿ : ಎಂ.ರಾಮಚಂದ್ರ

  • ಬಿಜೆಪಿ ನಗರ ಮಂಡಲ ವತಿಯಿಂದ ವಿಶ್ವಪರಿಸರ ದಿನಾಚರಣೆ

ಚಾಮರಾಜನಗರ : ಪ್ರಧಾನಿ ನರೇಂದ್ರಮೋದಿಯವರ ಆಶಯದಂತೆ ಪ್ರತಿಯೊಬ್ಬರೂ ಒಂದೊಂದು ಗಿಡನೆಟ್ಟು ಪರಿಸರ ಉಳಿಸಿ ಬೆಳೆಸಬೇಕು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಸಲಹೆ ನೀಡಿದರು.
ನಗರದ ರಾಮಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡನೆಟ್ಟು ನೀರೆರೆದು ಮಾತನಾಡಿದರು.
ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಧಿಕಾರಿ ಸ್ವೀಕರಿಸಿ ಇಂದಿಗೆ 12 ವರ್ಷಗಳು ಆಗಿದೆ. ಅವರ ಕರೆಯಂತೆ ಇಡೀ ದೇಶದಲ್ಲಿ ಪರಸರ ಬಹಳ ಸುಂದರವಾಗಿರಬೇಕು. ಸ್ವಚ್ಚ ಭಾರತ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರೀಕನೂ ತನ್ನ ತಾಯಿ ಹೆಸರಿನಲ್ಲಿ ಒಂದು ಗಿಡ ನಡೆಯುವ ಮೂಲಕ ಪರಿಸರ ಕಾಪಾಡಬೇಕು ಎಂಬ ಆದೇಶದಿಂದ ಇಡೀ ರಾಷ್ಟ್ರದಲ್ಲಿ ಬಿಜೆಪಿ ಶಾಲೆಗಳು, ಆಸ್ಪತ್ರೆಗಳು ಸ್ವಚ್ಚ ಮಾಡುವುದು, ಗಿಡ ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆ ಮಾಡಲಾಗುತ್ತಿದೆ ಪ್ರತಿಯೊಬ್ಬರೂ ಮನೆ ಮುಂದೆ ಗಿಡನೆಟ್ಟು ಬೆಳೆಸಿದರೆ ಉತ್ತಮ ಗಾಳಿ, ಆರೋಗ್ಯ ಸಿಗುತ್ತದೆ ಆಗಾಗಿ ಪರಿಸರ ಉಳಿವಿಗಾಗಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ನರೇಂದ್ರಮೋದಿ ಅವರು ಮೊಟ್ಟಮೊದಲು ಪ್ರಧಾನಿಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಿದ ಮೇಲೆ ಒಂದು ದೃಢ ವಿರ್ಧಾರ ತೆಗೆದುಕೊಂಡು, ಸ್ವಚ್ಚಭಾರತ ಅಭಿಯಾನದ ಮೂಲಕ ಪರಿಸರ ಉಳಿಸಬೇಕು.
ಪರಿಸರ ಉಳಿದರೆ ಪ್ರತಿಯೊಬ್ಬರ ಜೀವನ ಉಳಿಯುತ್ತದೆ ಎಂಬ ಧೈಯವಾಕ್ಯದಲ್ಲಿ ತಮ್ಮ ಆಡಳಿತ ಅರಂಭ ಮಾಡಿದರು.ದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪರಿಸರ, ಪ್ರತಿಯೊಬ್ಬರ ಗೌರವ ಕಾಪಾಡಬೇಕು ಎಂಬ ಉದ್ದೇಶನ್ನಿಟ್ಟುಕೊಂಡು ಸ್ವಚ್ಚಭಾರತ ಅಭಿಯಾನದಡಿಯಲ್ಲಿ ದೇಶದಲ್ಲಿ ಸುಮಾರು 12 ಕೋಟಿ ಗೂ ಹೆಚ್ಚು ಶೌಚಾಲಯ ನಿರ್ಮಿಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ ಕೀರ್ತಿ ನರೇಂದ್ರಮೋದಿ ಅವರಿಗೆ ಸಲ್ಲುತ್ತದೆ ಎಂದರು.
  ಕಾರ್ಯಕ್ರಮದಲ್ಲಿ  ನಗರಸಭಾ ಮಾಜಿ ಅಧ್ಯಕ್ಷ ಸುರೇಶ್, ನಗರಮಂಡಲ ಅಧ್ಯಕ್ಷ ಶಿವರಾಜು
ಓಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಚೂಡಾ ಮಾಜಿ ಅಧ್ಯಕ್ಷ  ಶಾಂತಮೂರ್ತಿ ಕುಲಗಾಣ, ಬಾಲಸುಬ್ರಹ್ಮಣ್ಯಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಅರಕಲವಾಡಿ ನಾಗೇಂದ್ರ, ಮುಖಂಡ ಅರಕಲವಾಡಿ ನಾಗೇಂದ್ರ, ಸಾಹಿತಿ ಮಂಜುನಾಥಪ್ರಸನ್ನ,
ನಗರ ಮಂಡಲ, ಪ್ರಧಾನ ಕಾರ್ಯದರ್ಶಿ ಗಳಾದ ಕೂಸಣ್ಣ, ಭಾಸ್ಕರ್,  ಎಸ್ ಟಿ ಮೋರ್ಚಾದ  ರಾಜ್ಯ ಕಾರ್ಯದರ್ಶಿ ಜಯಸುಂದರ್,
ಜಿಲ್ಲಾಧ್ಯಕ್ಷ ಚಂದ್ರಶೇಖರ್,  ಉಪಾಧ್ಯಕ್ಷ ಬುಲೆಟ್ , ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯಕುಮಾರ್,
ಚಂದ್ರು, ಯುವ ಮೋರ್ಚಾದ
ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ,  ನಗರಸಭಾ ಸದಸ್ಯರಾದ ಶೇಖರ್,ಮಂಜುನಾಥ್,  ಶಿವಣ್ಣ,ಎಸ್ ಸಿ ಮೋರ್ಚಾದ ಜಿಲ್ಲಾ ಪ್ರಧಾನ ‌ಕಾರ್ಯದರ್ಶಿ ರಾಮಸಮುದ್ರ ಶಿವು, ಮುಖಂಡರಾದ ಚಂದ್ರಶೇಖರ್, ಬಂಗಾರನಾಯಕ, ಪರಶಿವಯ್ಯ, ಮಣಿ, ಕಾರ್ಯಾಲಯ ಕಾರ್ಯದರ್ಶಿ ರಂಗಸ್ವಾಮಿ, ಮಂಜುನಾಥ್, ವೀರೇಂದ್ರ, ಶಾಲೆಯ ಮುಖ್ಯ ಶಿಕ್ಷಕ ಎಂ.ನಂಜುಂಡಸ್ವಾಮಿ, ಶಿಕ್ಷಕಿ ದೇವಿಕಾ ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *