ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ ಬೆಳೆಸುವ ಅಗತ್ಯತೆ ಇದೆ : ಕುರುಬೂರು ಶಾಂತಕುಮಾರ್

ಚಾಮರಾಜನಗರ : ನಮ್ಮ ಉಳಿವಿಗಾಗಿ ಪರಿಸರ, ಕೆರೆಗಳನ್ನು ಸಂರಕ್ಷಣೆ ಮಾಡುವುದು ಅತ್ಯಂತ ಅಗತ್ಯವಾಗಿದ್ದು, ರೈತರು ಮನಸ್ಸು ಮಾಡಿದರೆ ದೇಶದಲ್ಲಿ ಪರಿಸರ ಸಮತೋಲನ ಸುಧಾರಿಸಬಹುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.ಅಂಬೇಡ್ಕರ್
   ನಗರದ ಎಪಿಎಂಸಿ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.
    ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಹೊರತು ಮರಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಜನಸಂಖ್ಯೆಗೆ… ಆಧಾರವಾಗಿ ಮರಗಳು ಹೆಚ್ಚಾಗಬೇಕು ಆಗ ಪ್ರತಿಯೊಬ್ಬರಿಗೂ ಸಂಪೂರ್ಣ ಸಿಗುತ್ತದೆ. ಇಲ್ಲದಿದ್ದರೆ ಆಮ್ಲಜನಕ ಕೊರತೆ ಎದುರಿಸಬೇಕಾಗುತ್ತದೆ. ದೆಹಲಿಯಲ್ಲಿ ಆಮ್ಲ ಜನಕಕ್ಕಾಗಿ ನಗರ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಾರೆ. ಹಣಕೊಟ್ಟ ಆಮ್ಲ ಜನಕ ಉಪಯೋಗಿಸುವ ಪರಿಸ್ಥಿತಿಗೆ ಬಂದಿದ್ದಾರೆ. ಇದು ಮುಂದೆ ದೊಡ್ಡ ಪರಿಣಾಮ ಬೀರುತ್ತದೆ. ರೈತರು ಮನಸ್ಸು ಮಾಡಿದರೆ ಎಲ್ಲವನ್ನೂ ಬದಲಾವಣೆ ಮಾಡಬಹುದು ಎಂದರು.
ಪರಿಸರ ದಿನಾಚರಣೆ ನಮಗಾಗಿ ಅಲ್ಲ ಇಡೀ ಸಮಾಜಕ್ಕಾಗಿ, ಅರಣ್ಯ ಇಲಾಖೆ ಹೆಚ್ಚು ಕಾಳಜಿ ಮಾಡುವ ಜವಾಬ್ದಾರಿ ಅವರದ್ದು. ಮರ ಕಟ್ ಮಾಡುವುದು, ಮರ ಬೆಳೆಸುವ ಅನುಮತಿ ಜೊತೆಗೆ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕಿದೆ – ಎಲ್ಲವರ್ಗ ಜನರನ್ನು ಕ್ರೋಡೀಕರಿಸಿ ಕಾರ್ಯಕ್ರಮ ಮಾಡಿದರೆ ಜಾಗೃತಿ ಬರುತ್ತದೆ. ಮಕ್ಕಳು ಪರಿಸರದ ಬಗ್ಗೆ ತಿಳಿದುಕೊಂಡರೆ ಅವರಿಂದ ಒಂದಿಷ್ಟು ಉಪಯೋಗ ಆಗುತ್ತದೆ. ಎಲ್ಲ ವರ್ಗ ಜನರನ್ನು ಒಗ್ಗೂಡಿಸಿಕೊಂಡು ಪರಿಸರವನ್ನು ಕಾಪಾಡುವ ಕೆಲಸ ಮಾಡಬೇಕಾಗುತ್ತದೆ ಎಂದರು.
ವಿಷದ ಆಹಾರ ಸೇವನೆಯಿಂದ ಮನುಷ್ಯನಿಗೆ ಬಾರಬಾದರ ರೋಗಗಳು ಬರುತ್ತಿವೆ. ಹಣದ ಲಾಭಕ್ಕಾಗಿ ಕೃಷಿಯಲ್ಲಿ ಕೀಟನಾಶಕ ಸಿಂಪಡಿಸುತ್ತೀರಿ ಇಂತಹ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗಿ. ಆಸ್ಪತ್ರೆಗಳಿಗೆ ಲಕ್ಷ ಲಕ್ಷ ಹಣ ಕೊಡುತ್ತಿದ್ದೀರಿ. ರೈತರ ಮನಸ್ಸು ಮಾಡಿದರೆ ದೇಶದಲ್ಲಿ  ಸುಧಾರಣೆ ಮಾಡಬಹದು ಎಂದರು
.ರಾಜ್ಯದಲ್ಲಿ 41,200 ಕೆರೆಗಳು ಇದ್ದು, ಮರಾಜನಗರ ಜಿಲ್ಲೆಯಲ್ಲಿ 690 ಕೆರೆಗಳ ಪುನರ್ಜೀವನಗೊಳಿಸಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈಗ ಏಳು ಜನರಿಗೆ ಒಂದು ಮರ ಆಮ್ಲಜನಕ ನೀಡುತ್ತಿದೆ ಎಂದು ವರದಿ ಹೇಳುತ್ತದೆ. ಶುದ್ಧ ಪರಿಸರವಿದ್ದರೆ ಪ್ರತಿಯೊಬ್ಬ ಮನುಷ್ಯರಿಗೆ ಶುದ್ಧ ಆರೋಗ್ಯವಿರುತ್ತದೆ. ರೈತರು ಗ್ರಾಮೀಣ ಭಾಗದಲ್ಲಿರುವ ಕೆರೆಗಳ ಊಳು ತೆಗೆಸಿ ಜಮೀನಿಗೆ ಮಣ್ಣು ಹಾಕಿ ಕೊಂಡರೆ ಭೂಮಿ ಫಲವತ್ತತೆ ವೃದ್ಧಿಯಾಗಿ ರಸಗೊಬ್ಬರ ಕೀಟನಾಶಕ ಬಳಕೆ ಕಡಿಮೆಯಾಗುತ್ತದೆ. ಉತ್ತಮ ಆಹಾರ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಮಾತನಾಡಿ, ಕೊರೋನ ಸಂದರ್ಭದಲ್ಲಿ ಅಮ್ಲಜನಕ ಸರಬರಾಜು ಇಲ್ಲದ ಕಾರಣ ಹಲವಾರು ಜನರು ಚಾಮರಾಜನಗರದಲ್ಲಿ ಸಾವಿಗೀಡಾದರು. ಆಮ್ಲಜನಕ ಮರಗಳಿಂದಲೇ ಉತ್ಪಾದನೆಯಾಗುವುದು ಆದ್ದರಿಂದ ಪರಿಸರ ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಮಾತನಾಡಿ, ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಕೇಂದ್ರ ಪರಿಸರ ವಾಯುಮಾಲಿನ್ಯ ಇಲಾಖೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಪರಿಸರದ ಸಂರಕ್ಷಣೆಯಲ್ಲಿ ಶುದ್ಧ ಗಾಳಿ ಸಿಗುವ ಜಿಲ್ಲೆ ದೇಶದಲ್ಲಿಯೇ ಚಾಮರಾಜನಗರ 4ನೇ ಸ್ಥಾನ ಪಡೆದಿದೆ.  ಇದು ನಮಗೆಲ್ಲ ವರದಾನವಾಗಿದೆ. ಇದನ್ನು ಉಳಿಸಿಕೊಳ್ಳುವುದು ಜಿಲ್ಲೆಯ ಪ್ರತಿಯೊಬ್ಬರೂ ಕರ್ತವ್ಯ ವಾಗಿದೆ ಎಂದರು
  ಕೃಷಿ ಉತ್ಪನ್ನ ಮಾರುಕಟ್ಟೆ ಜಿಲ್ಲಾ ಉಪ ನಿರ್ದೇಶಕ ಬಸವಣ್ಣ ಮಾತನಾಡಿ, ರೈತರು ಮನಸು ಮಾಡಿದರೆ ವರ್ಷ ಪೂರ್ತಿ ಮರ ಗಿಡ ನೆಟ್ಟು ಪರಿಸರ ಸಂರಕ್ಷಿಸಲು ಸಾಧ್ಯವಿದೆ ಎಂದರು.
   ಕಾರ್ಯಕ್ರಮದಲ್ಲಿಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ ಮೈಸೂರು ಮತ್ತು ಚಾಮರಾಜನಗರ
ಜಿಲ್ಲಾಧ್ಯಕ್ಷ ಸೋಮಶೇಖರ್ ,ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಉಪಾಧ್ಯಕ್ಷ ಮೂಡಲಪುರ ಶಿವಮೂರ್ತಿ ಜಿಲ್ಲಾ ಕಾರ್ಯದರ್ಶಿ ಹೆಚ್. ಮೂಕಳ್ಳಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ನಂಜೇದೇವನಪುರ ಸತೀಶ್ ,ತಾಲೂಕು ಉಪಾಧ್ಯಕ್ಷರಾದ ಎಚ್ .ಮೂಕಳ್ಳಿ ಶಿವಕುಮಾರಸ್ವಾಮಿ  ಹೆಗ್ಗೋಠಾರ ಶಿವಸ್ವಾಮಿ ,ತಾಲೂಕು ಕಾರ್ಯದರ್ಶಿ, ಉಡಿಗಾಲ ಸುಂದ್ರಪ್ಪ ,ಯಳಂದೂರು ತಾಲೂಕು ಅಧ್ಯಕ್ಷ ಗೌಡಳ್ಳಿ ಷಡಕ್ಷರಿಸ್ವಾಮಿ ಕಾರ್ಯದರ್ಶಿ ಯರಿಯೂರ ಮಹೇಶ್ ,
ಮೆಲ್ಲಹಳ್ಳಿ ಚಂದ್ರಶೇಖರ್ ಮೂರ್ತಿ, ಎ.ಸಿ.ಸಿದ್ದರಾಜು,
ಉಡಿಗಾಲ ಗುರುಪ್ರಸಾದ್ ನಟರಾಜು, ವಿಜಯ್ ಕುಮಾರ್, ನವೀನ್ ಮಹೇಂದರ್, ಮೈಸೂರು ತಾಲೂಕು ಸಂಘದ ಮುಖಂಡರು, ನಂಜನಗೂಡು ತಾಲೂಕು ಸಂಘದ ಮುಖಂಡರಗಳು ನರಸೀಪುರ ತಾಲೂಕು ಸಂಘದ ಮುಖಂಡರುಗಳು ಹಾಜರಿದ್ದರು.

Leave a Reply

Your email address will not be published. Required fields are marked *