ಗೌರಿ–ಗಣೇಶ ಹಬ್ಬ:  ಚಾಮರಾಜನಗರದಲ್ಲಿ ಬೆಲೆ ಏರಿಕೆ ನಡುವೆ ಖರೀದಿ ಭರಾಟೆ ಜೋರು

ಚಾಮರಾಜನಗರ : ಗೌರಿ–ಗಣೇಶ ಹಬ್ಬಕ್ಕೆ ಜಿಲ್ಲೆಯಲ್ಲಿ ಸಿದ್ಧತೆ ಭರದಿಂದ ಸಾಗಿದ್ದು, ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.

 ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಬ್ಬದ ಮುನ್ನಾ ದಿನವಾದ ಭಾನುವಾರ   ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು, ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮಾರುಕಟ್ಟೆಗೆ ತೆರಳಿದ ಜನರು ಗೌರಿ ಗಣೇಶ ಮೂರ್ತಿಗಳು, ಹೂವು, ಹಣ್ಣು ಪೂಜಾ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು.

ಗೌರಿ,ಗಣೇಶ ಮೂರ್ತಿ ಖರೀದಿ : ಗೌರಿ ಗಣೇಶ ಹಬ್ಬದ ಪ್ರಮುಖ ಆಕರ್ಷಣೆ ಗಣೇಶ ಮೂರ್ತಿ ಪ್ರತಿಷ್ಟಾಪನೆ ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಗೌರಿ ಮಳಿಗೆಗಳನ್ನು ತೆರೆದಿದ್ದು ಯುವಕರು. ಮಹಿಳೆಯರು ಗೌರಿ ಗಣೇಶ ಮೂರ್ತಿಗಳನ್ನು ಖರೀದಿಸಿದರು. 50 ರೂ.ಗಳಿಂದ 10 ಸಾವಿರ ತನಕ ಮೂರ್ತಿಗಳ ಬೆಲೆ ನಿಗದಿಯಾಗಿದ್ದು ಗೌರಿ ಗಣೇಶ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ದರು.

ಹೂವು, ಹಣ್ಣು, ಬಟ್ಟೆ ಖರೀದಿ : ಹಬ್ಬಕ್ಕೆ
ಅಗತ್ಯವಾದ ಹೂವು, ಹಣ್ಣು, ಆಲಂಕಾರಿಕ ವಸ್ತುಗಳು ಹಾಗೂ ಬಟ್ಟೆಗಳನ್ನು ಜನರು ಖರೀದಿಸಿದರು. ಮಲ್ಲಿಗೆ, ಮಲ್ಲೆ, ಚೆಂಡು ಹೂವು, ಹಾರಗಳ ಖರೀದಿಯೂ  ಹಣ್ಣುಗಳನ್ನು ಜನರು ಖರೀದಿ ಮಾಡಿದರು.

ಅಲ್ಲದೇ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಬೇಕಾದ ಅಲಂಕಾರಿಕ ವಸ್ತುಗಳನ್ನು ಯುವಕರು ಖರೀದಿಸಿದರು. ಅಲ್ಲದೇ ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ಅಂಗಡಿ ಬೀದಿಯಲ್ಲಿ ಜನಸಂದಣಿ ಕಂಡುಬಂತು.

Leave a Reply

Your email address will not be published. Required fields are marked *