- ಸದ್ಯದಲ್ಲೇ ವೇದಿಕೆ ಕಾರ್ಯಕ್ರಮ, ಗಣಪತಿ ಮೂರ್ತಿ ವಿಸರ್ಜನೆಗೆ ದಿನಾಂಕ ನಿಗದಿ: ನವೀನ್ ಕುಮಾರ್
ಚಾಮರಾಜನಗರ: ಗಣೇಶ ಚತುರ್ಥಿ ಅಂಗವಾಗಿ ನಗರದ ರಥದ ಬೀದಿಯಲ್ಲಿ ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ನಗರದ ಗುರುನಂಜಶೆಟ್ಟಿ ಛತ್ರದ ಮುಂಭಾಗದಲ್ಲಿ 64ನೇ ವರ್ಷದ ಶ್ರೀಸಿಂಹರೂಢ ವೀರ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಶಿಧರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭಾ ಮಾಜಿ ಅಧ್ಯಕ್ಷರಾದ ಸುರೇಶ್, ಸುರೇಶ್‌ನಾಯಕ, ಮಾಜಿ ಚುಡಾ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ, ಬಾಲಸುಬ್ರಹ್ಮಣ್ಯ, ಶ್ರೀನಿವಾಸಗೌಡ, ಡಾ. ಎ.ಆರ್.ಬಾಬು, ಮುಖಂಡರಾದ ಬಂಗಾರಸ್ವಾಮಿನಾಯಕ, ಮೂಡ್ನಾಕೂಡ ಪ್ರಕಾಶ್, ನಗರಸಭಾ ಮಾಜಿ ಸದಸ್ಯರಾದ ಶಿವಣ್ಣ, ಸುದರ್ಶನಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರನಂದೀಶ್, ಉದ್ಯಮಿ ಶ್ರೀನಿಧಿಕುದರ್, ಪ್ರತಾಪ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಇದಕ್ಕೂ ಮುನ್ನಾ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಆದಿಶಕ್ತಿ ದೇವಸ್ಥಾನದಿಂದ ಸಂತೇಮರಹಳ್ಳಿ ವೃತ್ತ, ಚಿಕ್ಕಂಗಡಿ ಬೀದಿ, ನಗರಸಭೆ ಕಚೇರಿ, ರಥಬೀದಿಯವರಗೆ ಮೆರವಣಿಗೆ ನಡೆಸಿ, ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀವಿದ್ಯಾ ಗಣಪತಿ ಮಂಡಳಿ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಒಂದಲ್ಲ ಒಂದು ವೈವಿದ್ಯಮಯ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದ್ದು, ಈ ಬಾರಿಯೂ ಶ್ರೀಸಿಂಹರೂಢ ವೀರ ಗಣಪತಿ ಪ್ರತಿ ಪ್ರತಿಷ್ಠಾಪಿಸಲಾಗಿದೆ. ಕಳೆದ 64 ವರ್ಷಗಳಿಂದ ವಿಜೃಂಭಣೆಯಿಂದ ಗಣಪತಿಮೂರ್ತಿ ಪ್ರತಿಷ್ಠಾಪಿಸಿ ಕೊಂಡು ಬರಲಾಗಿದ್ದು,ಸದ್ಯದಲ್ಲೇ ವೇದಿಕೆ ಕಾರ್ಯಕ್ರಮಗಳು, ಗಣಪತಿಮೂರ್ತಿ ವಿಸರ್ಜನೆಗೆ ದಿನಾಂಕ ನಿರ್ಧರಿಸಲಾಗುವುದು ಎಂದರು.
ಶ್ರೀವಿದ್ಯಾಗಣಪತಿ ಮಂಡಳಿ ಗೌರವಾಧ್ಯಕ್ಷ ಗುರುನಾಥ್, ಗೌರವ ಕಾರ್ಯದರ್ಶಿ ಮಾದ, ಕಾರ್ಯಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಆನಂದ್‌ಭಗೀರಥ, ರಾಜು ಭಕ್ತ, ಖಜಾಂಚಿ ಮನೋಜ್‌ಪಟೇಲ್, ಉಪಾಧ್ಯಕ್ಷ ಬುಲೆಟ್‌ಚಂದ್ರು, ಶಂಕರ್, ಶಿವರಾಜು, ಮಣಿಕಂಠ, ರಮೇಶ್, ರಂಗಸ್ವಾಮಿ, ಗಿರೀಶ್‌ರಾಮಸಮುದ್ರ, ಮಂಜು ಇತರರು ಭಾಗವಹಿಸಿದ್ದರು.
