ಒಂದೇ ದಿನ ಬಂದ ಗೌರಿ-ಗಣೇಶ ಹಬ್ಬ: ಚಾಮರಾಜನಗರದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ

ಚಾಮರಾಜೇಶ್ವರ ದೇವಸ್ಥಾನದಲ್ಲಿ ಸುಮಂಗಲಿಯರಿಂದ ಸ್ವರ್ಣಗೌರಿಗೆ ಬಾಗಿನ  ಚಾಮರಾಜನಗರ:  ನಗರದಲ್ಲಿ ಗೌರಿಗಣೇಶ ಹಬ್ಬವನ್ನ ಸಡಗರ,ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಗೌರಿ ಗಣೇಶ ಹಬ್ಬದ ಅಂಗವಾಗಿ ಚಾಮರಾಜೇಶ್ವರ ದೇವಸ್ಥಾನದಲ್ಲಿ ಮಹಿಳೆಯರು ಅತ್ಯಂತ ಸಡಗರ-ಸಂಭ್ರಮದಿಂದ ಗಣೇಶಗೌರಿಗೆ ಪೂಜೆ ಸಲ್ಲಿಸಿ, ಸುಮಂಗಲಿಯರು ಸ್ವರ್ಣಗೌರಿ ದೇವಿಗೆ ಬಾಗಿನ ಸಮರ್ಪಿಸಿದರು.

ಗೌರಮ್ಮನಿಗೆ ಸಾಂಪ್ರದಾಯಿಕವಾಗಿ  ಮೊರದ ಬಾಗಿನ ನೀಡುವ ಮೂಲಕ ಸೌಭಾಗ್ಯ, ನೆಮ್ಮದಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಗೌರಿದೇವಿಗೆ ಬಾಗಿನ ಅರ್ಪಣೆ ವಿಶೇಷವಾದ್ದದು : ಅರ್ಚಕ ರಾಮಕೃಷ್ಣಭಾರಧ್ವಜ್‌ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಸ್ವರ್ಣಗೌರಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು, ಸ್ವರ್ಣಗೌರಿ ಮಾಂಗಲ್ಯಸೂತ್ರದ ಮುಖಾಂತರ ಬಂದಿದೆ ಎಂದು ಸುಮಂಗಲಿಯರು ಭಗವಂತನಲ್ಲಿ ಪ್ರಾರ್ಥಿಸಿ ಬೆಳಿಗ್ಗೆ ಪೂಜೆ ಸಲ್ಲಿಸಲ್ಲಿ ದೇವಿಗೆ ಬಾಗಿನ ಅರ್ಪಿಸಿದರು. ಸ್ವರ್ಣಗೌರಿಯ ಕೃಪಾಕಟಾಕ್ಷ ಎಲ್ಲ ಸುಮಂಗಲಿಯರ ಮೇಲೆ ಇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು.
ಬಾಗಿನ ಸೌಭಾಗ್ಯದ ಸಂಕೇತ: ಸುಮಂಗಲಿ ಮಹಿಳೆಯರು ತಾಯಿಯ ಮನೆಗೆ ಬಂದ ಗೌರಿಯನ್ನು ಸತ್ಕರಿಸಿ, ಮತ್ತೊಬ್ಬ ಮುತ್ತೈದೆಗೆ ಬಾಗಿನ ನೀಡುವ ಮೂಲಕ ಸೌಭಾಗ್ಯ ವೃದ್ಧಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.ಮೊರದ ಬಾಗಿನದಲ್ಲಿ ಅಕ್ಕಿ, ಬೇಳೆ, ತೊಗರಿಬೇಳೆ, ಕಡಲೆಬೇಳೆ ಸೇರಿದಂತೆ ನವಧಾನ್ಯಗಳು, ಬೆಲ್ಲ, ಅರಿಶಿನ-ಕುಂಕುಮ, ಗಾಜಿನ ಬಳೆಗಳು, ಕನ್ನಡಿ, ಬಾಚಣಿಗೆ ಮತ್ತು ಬ್ಲೌಸ್ ಪೀಸ್ ಇಟ್ಟು ಗೌರವಪೂರ್ವಕವಾಗಿ ನೀಡಲಾಗುತ್ತದೆ ಎಂದರು.

ಸ್ವರ್ಣಗೌರಿಗೆ ಬಾಗಿನ ಅರ್ಪಿಸಿದ ಚಾಮರಾಜನಗರ ಹರ್ಷಿತ ಮಾತನಾಡಿ, ಗೌರಿಗಣೇಶ ಹಬ್ಬ ಎಂದರೆ ಸೌಭಾಗ್ಯದ ಸಂಕೇತ. ಭಾದ್ರಪದಮಾಸದ ಶುಕ್ಲ ತೃತೀಯಾದಂದು ಆಚರಿಸಲಾಗುವ ಈ ಹಬ್ಬದಲ್ಲಿ ಸುಮಂಗಲಿಯರು ಗೌರಿಗೆ. ಪೂಜೆಸಲಿಸಿ ಬಾಗಿನ ಅರ್ಪಿಸುವುದು ಅತ್ಯಂತ ಸಾಂಪ್ರದಾಯಕ ಆಚರಣೆಯಾಗಿದ್ದು. ನಾವು ಕೂಡ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಗೌರಮ್ಮಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಗೌರಿಗಣೇಶ ಆಶೀರ್ವಾದ ಪಡೆಯಲಾಯಿತು ಎಂದರು.

Leave a Reply

Your email address will not be published. Required fields are marked *