- ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ರಘುದೀಕ್ಷಿತ್, ನವೀನ್ ಸಜ್ಜು ಅವರಿಂದ ಸಂಗೀತ ರಸದೌತಣ
- ಬಿಗ್ ಬಾಸ್ ಖ್ಯಾತಿಯ ಹನುಮಂತು ಅವರಿಂದ ಜಾನಪದ ವೈಭವ
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 17 ರಿಂದ 19ರವರೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಖ್ಯಾತ ಚಲನಚಿತ್ರ ನಟರು, ಗಾಯಕರಿಂದ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲೆಯ ಜನತೆಗೆ ಸಂಗೀತ ರಸದೌತಣವೇ ಒದಗಲಿದೆ.
ಅಕ್ಟೋಬರ್ 17ರಂದು ಸಂಜೆ ಚಾಮರಾಜೇಶ್ವರ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಖ್ಯಾತ ಚಲನಚಿತ್ರ ನಟ, ನಿರ್ದೇಶಕರಾದ ವಿ. ರವಿಚಂದ್ರನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಖ್ಯಾತ ಹಿನ್ನಲೆ ಗಾಯಕರಾದ ರಾಜೇಶ್ ಕೃಷ್ಣನ್ ಅವರಿಂದ ಮ್ಯೂಸಿಕಲ್ ನೈಟ್ ಹಾಗೂ ಬೆಂಗಳೂರು ಕಲಾವಿದರಿಂದ ಬ್ಯಾಂಬೊ ಮ್ಯೂಸಿಕಲ್ ಲೈಟ್ ನಡೆಯಲಿದೆ.
ಅಕ್ಟೊಬರ್ 18ರಂದು ಸಂಜೆ ಖ್ಯಾತ ಗಾಯಕ ನವೀನ್ ಸಜ್ಜು ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್, ಡಿ.ಕೆ.ಡಿ ತಂಡದವರಿಂದ ಕರ್ನಾಟಕ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಹಾಗೂ ಅಕ್ಟೋಬರ್ 19ರಂದು ಖ್ಯಾತ ಗಾಯಕರಾದ ರಘುದೀಕ್ಷಿತ್ ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್ ಮತ್ತು ಬಿಗ್ ಬಾಸ್ ವಿಜೇತರಾದ ಹನುಮಂತು ಮತ್ತು ತಂಡದವರಿಂದ ಜಾನಪದ ವೈಭವ ಕಾರ್ಯಕ್ರಮ ಆಕರ್ಷಣೆಯಾಗಿದೆ.
Related