- ಎಚ್. ಎನ್ .ವಿಜಯಕುಮಾರ್ ಭೇಟಿ, ಸಾಂತ್ವಾನ
ಚಾಮರಾಜನಗರ : ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ಅವರ ಪುತ್ರ ಜೆ. ಹೇಮಂತ್ ಕುಮಾರ್ ಅವರು ಇತ್ತೀಚೆಗೆ ಮೈಸೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ನಗರದ ಚೆನ್ನಿಪುರಮೋಳೆಯಲ್ಲಿರುವ ಅವರ ನಿವಾಸಕ್ಕೆ ಉಪ್ಪಾರ ಸಮಾಜದ ಹಿರಿಯರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
ಹರದನಹಳ್ಳಿ ಎಚ್. ಎನ್ .ವಿಜಯಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಹೇಮಂತ್ ಕುಮಾರ್ ಅ ವರ ನಿಧನಕ್ಕೆ ಸಂತಾಪ ಸೂಚಿಸಿದ ವಿಜಯಕುಮಾರ್ ಕುಟುಂಬಸ್ಥರೊಂದಿಗೆ ಮಾತನಾಡಿ ಅವರ ದುಃಖದಲ್ಲಿ ಭಾಗಿಯಾದರು. ಅಗಲಿದ ಹೇಮಂತ್ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಹೆಚ್.ಎನ್. ವಿಜಯಬ್ರಿಗೇಡ್ ರಾಜ್ಯಾಧ್ಯಕ್ಷ ಬಾಗಳಿರೇವಣ್ಣ,
ಸೋಮಣ್ಣ ,ಮಾದೇಶ ಉಪ್ಪಾರ್, , ಕೆಂಪರಾಜು, ರಾಜೇಂದ್ರ, ರಘು, ನಾಗೇಂದ್ರ ಬೆಂಕಿ ಇತರರು ಹಾಜರಿದ್ದರು.
