- ನಗರದಲ್ಲಿ ಜಾತ್ಯಾತೀತ ಜನತಾದಳ ಕಾರ್ಯಕರ್ತರು ಮತ್ತು ಮುಖಂಡರ ಸಭೆ
ಚಾಮರಾಜನಗರ : ಮುಂಬರುವ ದಿನಗಳಲ್ಲಿ ತಾ.ಪಂ, ಜಿ.ಪಂ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆ ಬರುವ ಹಿನ್ನಲೆಯಲ್ಲಿ ಜಾ ದಳ ಕಾರ್ಯಕರ್ತರು ಸಜ್ಜಾಗಬೇಕು ಎಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜಾ ದಳ ಅಧ್ಯಕ್ಷ ಎ.ಎಂ.ಮಲ್ಲಿಕಾರ್ಜುನಸ್ವಾಮಿ ( ಆಲೂರುಮಲ್ಲು) ಕರೆ ನೀಡಿದರು.
ನಗರದ ಪ್ರವಾಸಿಮಂದಿರದಲ್ಲಿ ಜಾತ್ಯಾತೀತ ಜನತಾದಳ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಮಾರು 20 ವರ್ಷಗಳಿಂದ ಹಿಂದೆ ಚಾಮರಾಜನಗರ ಜಿಲ್ಲೆಯು ಜಾ ದಳ ಭದ್ರಕೋಟೆಯಾಗಿತು. ಇಂದು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಶಾಸಕರಾದ ಮಂಜುನಾಥ್ ಇದ್ದಾರೆ. ಇನ್ನೂ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದು, ಶಾಸಕರು ಇದ್ದಾರೆ.
ಆಗಾಗಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಪಕ್ಷ ಸಂಘಟನೆಯಾಗಬೇಕು. ಕೊಳ್ಳೇಗಾಲದಲ್ಲಿ ಪುಟ್ಟಸ್ವಾಮಿ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು ಸಂಘಟನೆ ಮಾಡುತ್ತಿದ್ದಾರೆ. ಅದೇ ರೀತಿ ಚಾಮರಾಜನಗರದಲ್ಲೂ ಪಕ್ಷ ಸಂಘಟನೆ ಆಗಬೇಕು ಅದಕ್ಕಾಗಿ ಈಗಿನಿಂದಲ್ಲೇ ಬೂತಮಟ್ಟದಿಂದ ಕಾರ್ಯಕರ್ತರು ಸಂಘಟಿತರಾಗಿ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಜಾ ದಳ ಸಾಮಾಜಿಕ ಜಾಲತಾಲ ಜಿಲ್ಲಾಧ್ಯಕ್ಷ ದಾಸನಹುಂಡಿ ಸುನಿಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ.ವಿಜಯ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಅರಕಲವಾಡಿ ಅಜಯ್, ಹನೂರು ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ಅಧ್ಯಕ್ಷ ದೇವರಾಜು ಎಸ್.ಸತ್ಯಗಾಲ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ಅಧ್ಯಕ್ಷ ಚೇತನ್‌ಮೂರ್ತಿ,ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ಅಧ್ಯಕ್ಷ ಲೋಕೇಶ್, ರಾಜ್ಯ ಕಾರ್ಯದರ್ಶಿ ಹೊಂಗನೂರು ರಾಜಣ್ಣ, ಟೌನ್ ಅಧ್ಯಕ್ಷ ಜಿ.ಎಂ.ಶಂಕರ್, ಎಸ್‌ಟಿ ಘಟಕ ತಾಲೂಕು ಅಧ್ಯಕ್ಷ ಹರದನಹಳ್ಳಿ ರಾಮಚಂದ್ರ, ಪಣ್ಯದಹುಂಡಿರಾಜು, ನಾಗರಾಜು, ಮೇಗಲಹುಂಡಿ ಪಾಪಣಿ, ಬ್ಯಾಡಮೂಡ್ಡು ವರದರಾಜು, ಹೆಗ್ಗೋಠಾರಮಂಜು, ಸಿದ್ದಶೆಟ್ಟಿ, ಸುಬ್ಬಣ್ಣ, ಅಮಚವಾಡಿ ಶಿವಕುಮಾರ್ ಇತರರು ಭಾಗವಹಿಸಿದ್ದರು.