ಉರ್ದು ಹಬ್ಬ ವಿರೋಧಿಸಿ ಕರವೇಯಿಂದ ಪಂಜಿನ ಮೆರವಣಿಗೆ

  • ಉರ್ದುಹಬ್ಬ ಆಚರಣೆ ಕೈಬಿಡಲು ನವೀನ್ ಆಗ್ರಹ

ಚಾಮರಾಜನಗರ : ರಾಜ್ಯ ಸರ್ಕಾರ ಉರ್ದುಹಬ್ಬ ಆಚರಣೆಗೆ ಹೊರಟಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕದ ವತಿಯಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ನವೀನ್ ಕ್ಯಾಲಿಟ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿತರು ಅಲ್ಲಿಂದ ಪಂಜು ಹಿಡಿದು ಮೆರವಣಿಗೆಯಲ್ಲಿ ಭವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ, ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ಅಧ್ಯಕ್ಷ ನವೀನ್ ಕ್ಯಾಲಿಟಿ ಮಾತನಾಡಿ, ರಾಜ್ಯ ಸರ್ಕಾರ ನ. 9 ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಥಮಬಾರಿಗೆ ಆಯೋಜಿಸಲು ಹೊರಟಿರುವ ಉರ್ದು ಹಬ್ಬ ಆಚರಣೆಯನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವಂತಹ ನಿರ್ಧಾರವನ್ನು ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಉಪಾಧ್ಯಕ್ಷ ಉಮೇಶ್ ಸ್ಟ್ರೀಟ್, ಪ್ರಧಾನ‌ಕಾರ್ಯದರ್ಶಿ ಅರ್ಜುನ್, ಗೌರವ ಅಧ್ಯಕ್ಷ ಪುರುಷೋತ್ತಮ, ಟೌನ್ ಅಧ್ಯಕ್ಷ ಮಹೇಂದ್ರ ಉಪ್ಪಾರ್, ಕಾರ್ಮಿಕ ಘಟಕ ಅಧ್ಯಕ್ಷ ಹರೀಶ್ ನಾಯಕ, ಮಹೇಂದ್ರ, ಕಾರ್ಯದರ್ಶಿ ಗಳಾದ ಕೇಶವಮೂರ್ತಿ, ಈರಣ್ಣ, ರಿಜ್ವಾನ್, ದಯಾನಂದ್, ಮಹಮ್ಮದ್ ಚಾಂದ್, ಜಹೀರ್ಅಹಮದ್,ಆಟೋ‌ಮಧು, ಅರ್ಫಾಜ್, ನಲ್ಲೂರು ನಟರಾಜು, ಚಂದ್ರು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *