ಹೆಚ್.ಡಿ.ಕುಮಾರಸ್ವಾಮಿ ಸಾಮರ್ಥ್ಯ ಇರಲಿ ಪುಟ್ಟರಂಗಶೆಟ್ಟರೇ ಮೊದಲು ನಿಮ್ಮ ಸಾಮರ್ಥ್ಯ ಏನು ತೋರಿಸಿ : ಆಲೂರುಮಲ್ಲು ಸವಾಲು

  • ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ

ಚಾಮರಾಜನಗರ : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಾಮಾರ್ಥ್ಯ ಇರಲಿ ಪುಟ್ಟರಂಗಶೆಟ್ಟರೇ ಮೊದಲು ನಿಮ್ಮ ಸಾಮಾರ್ಥ್ಯ ಏನು ತೋರಿಸಿ ಎಂದು ಜೆಡಿಎಸ್ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎ.ಎಂ.ಮಲ್ಲಿಕಾರ್ಜುನ ಸ್ವಾಮಿ (ಆಲೂರುಮಲ್ಲು) ಸವಾಲು ಹಾಕಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ. ಕೊಳ್ಳೇಗಾಲದಲ್ಲಿ ಇತ್ತೀಚಿಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಧಾನಿ ಬಳಿ ಚರ್ಚಿಸಲುಸಾಮಾರ್ಥ್ಯ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಅಲ್ಲದೆ ಬೇರೆಬೇರೆ ಕಡೆಯು ಟೀಕೆ ಮಾಡಿದ್ದಾರೆ. ನಿಮಗೇನು ಸಾಮಾರ್ಥ್ಯ ಇದೆ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಮಾರ್ಥ್ಯವನ್ನು ತೋರಿಸಿದ್ದಾರೆ. ಗ್ರಾಮವಾಸವ್ಯ ಜನತಾದರ್ಶನ, ರೈತರ ಸಾಲಮನ್ನಾ ಮಾಡಿ ಅವರ ಸಾಮಾರ್ಥ್ಯವನ್ನು ತೋರಿಸಿದ್ದಾರೆ. ಅವರು ಪ್ರಧಾನಮಂತ್ರಿ ಕೇಳಿಕೊಂಡು ಸಾಲ ಮನ್ನಾ ಮಾಡುತಿನಿ ಎಂದು ಹೇಳಿಲ್ಲ. ರಾಜ್ಯ ಮುಖ್ಯಮಂತ್ರಿಯಾಗಿ 2 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು.

ಕುಮಾರಸ್ವಾಮಿ ಅವರು ದೀನದಲಿತರು, ರೈತರ ಸಮಸ್ಯೆ ಅರಿತು ಕೆಲಸ ಮಾಡಿದರು. ಪುಟ್ಟರಂಗಶೆಟ್ಟರು 20 ವರ್ಷದಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದಾರೆ. 2 ಬಾರಿ ಸಚಿವರು ಆಗಿದ್ದೀರಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ನೀವು ಒಂದು ದಿನವಾದರೂ ಸೋನಿಯಾಗಾಂಧಿ ಅವರ ಜೊತೆ ಮಾತನಾಡಿದ್ದೀರಾ..? ಹೋಗಲಿ ಪ್ರಿಯಾಂಕಗಾಂಧಿ ಅವರೊಂದಿಗಾದರೂ ಮಾತನಾಡಿದ್ದೀರಿ. ಮಲ್ಲಿ ಕಾರ್ಜುನಖರ್ಗೆ ಅವರೊಂದಿಗಾಗದರೂ ಮಾತನಾಡಿದ್ದೀರಿ ಎಂದು ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಸಂಸದ ದಿವಂಗತ ಧ್ರುವನಾರಾಯಣ್, ಹೆಚ್.ಎಸ್.ಮಹದೇವಪ್ರಸಾದ್ ಅವರು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿದ್ದರು. ಪುಟ್ಟರಂಗಶೆಟ್ಟರು ಕಳೆದ 15 ವರ್ಷಗಳಿಂದ ಒಂದು ಬಸ್ ನಿಲ್ದಾಣ ಮಾಡಕ್ಕೆ ಆಗಲಿಲ್ಲ. ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೆರೆಗಳಿಗೆ ನೀರು ತುಂಬಿಸಿದ್ದರು. ಇವರ ಏನಪ್ಪ ತುಂಬಿಸಿದರು. ರೈತರೊಂದಿಗೆ ಏಕವಚನದಲ್ಲಿ ಮಾತನಾಡುತ್ತಾರೆ. ಕೊಳ್ಳೇಗಾಲದಲ್ಲಿ ಶಾಸಕ ಎ.ಆ‌ರ್.ಕೃಷ್ಣಮೂರ್ತಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ಅಭಿವೃದ್ಧಿ ಕೆಲಸ ಮಾಡುತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ. ಜಿಲ್ಲೆಯ ಜನತೆ, ಕ್ಷೇತ್ರದ ಜನತೆಗೆ ಏನು ಮಾಡಿಲ್ಲ ಎಂದು ಕಿಡಿ ಕಾರಿದರು.

ರೈತರಿಗೆ ಬರಪರಿಹಾರ 2.500 ರೂ ಸಾಕೆ. ರೈತರ ಭಿಕ್ಷೆ ಬೇಡುವಾಂಗೆ ಆಯಿತು. ಪಂಚ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ.

ಗೃಹಲಕ್ಷ್ಮೀ ಹಣ ಸರಿಯಾಗಿ ಬರುತ್ತಿಲ್ಲ. ಅಂಗವಿಕಲವೇತನ, ವಿಧವಾವೇತನ, ವೃದ್ಯಾಪ್ಯವೇತನ ಸ್ಥಗಿತಗೊಳಿಸಿದ್ದಾರೆ.

ಸಿಎಂಗೆ ಕಪ್ಪು ಬಾವುಟ ಪ್ರದರ್ಶನ : ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೊಳ್ಳೇಗಾಲಕ್ಕೆ ಬರುವ ಮುಖ್ಯಮಂತ್ರಿಗಳಿಗೆ ಕಪ್ಪುಭಾವುಟ ಪ್ರದರ್ಶನ ಮಾಡುವುದಾಗಿ ಆಲೂರುಮಲ್ಲು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹೊಂಗನೂರು ರಾಜು, ಜಿಲ್ಲಾ ಉಪಾಧ್ಯಕ್ಷ ದೊಡ್ಡರಾಯಪೇಟೆ ಮಹೇಶ್‌ಗೌಡ, ಎಸ್‌ಟಿ ಘಟಕ ಜಿಲ್ಲಾಧ್ಯಕ್ಷ ರಾಮಚಂದ್ರ, ಮುಖಂಡರಾದ ಪಣ್ಯದಹುಂಡಿ ರಾಜಣ್ಣ, ನಾಗರಾಜು ಹಾಜರಿದ್ದರು

Leave a Reply

Your email address will not be published. Required fields are marked *