ಕೊಳ್ಳೇಗಾಲದಲ್ಲಿ ಸಿಎಂ ಭೇಟಿ ಮಾಡಿಸುವ ಸಚಿವರ ಭರವಸೆ : ಪಾದಯಾತ್ರೆ ಕೈಬಿಟ್ಟ ರೈತರು

  • ನಮ್ಮ ಮುಖ್ಯಮಂತ್ರಿಗಳು ರೈತಪರ : ಸಚಿವ ಸಿ.ಪುಟ್ಟರಂಗಶೆಟ್ಟಿ
    ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರೈತರೊಂದಿಗೆ ಕುಳಿತು ಸಮಸ್ಯೆ ಆಲಿಸಿದ ಸಚಿವರು.


ಜಿಲ್ಲಾ ಮಟ್ಟದಲ್ಲಿ ಆಗುವ ಕೆಲಸಗಳನ್ನು ಮಾಡಿಸುವೆ ರಾಜ್ಯ ಮಟ್ಟದಲ್ಲಿ ಆಗುವ ಕೆಲಸಗಳನ್ನು ಸರ್ಕಾರದ ಗಮನಕ್ಕೆ ತಂದು ಮಾಡಿಸುವ ಪ್ರಯತ್ನ ಮಾಡುವೆ
ಚಾಮರಾಜನಗರ : ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಪರ ಕಾಳಜಿ ಹೊಂದಿದ್ದಾರೆ. ಕೊಳ್ಳೇಗಾಲದಲ್ಲಿ ನಡೆಯುವ ವೇದಿಕೆ ಸಮಾರಂಭದಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿಸಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಭರವಸೆಗೆ ರೈತರು ಪಾದಯಾತ್ರೆ ಕೈ ಬಿಟ್ಟರು.
ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿ. ಇಂದು ಬೆಳಿಗ್ಗೆ ನಗರದ ಜಿಲ್ಲಾಡಳಿತ ಭವನದಿಂದ ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿ ಭೇಟಿಗಾಗಿ ಪಾದಯಾತ್ರೆ ಕೈಗೊಂಡು ಸಂತೇಮರಹಳ್ಳಿ ಪ್ರವೇಶಿತು. ಅಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಶ್ರೀರೂಪ, ಜಿ.ಪಂ. ಸಿಇಓ ಮೋನಾರೋತ್, ಎಸ್ಪಿ ಮುತ್ತುರಾಜು ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ನಾಳೆ ಕೊಳ್ಳೇಗಾಲದ ಎಂಜಿಎಸ್‌ವಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುವ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರೊಡನೆ ಭೇಟಿ ಮಾಡಿಸಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಅವರ ಬಳಿ ಅ
ನುದಾನವಿದ್ದು, ಮೇವು, ಮೇವಿನ ಬೀಜ.ವಿತರಣೆ ಮಾಡಲಾಗುತ್ತಿದೆ. ಕಾಲಕಾಲಕ್ಕೆ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲಾಗುತ್ತಿದೆ. ಅರಣ್ಯ ಇಲಾಖೆಯಲ್ಲಿ ಸತ್ತರೆ ಇಲಾಖೆಯವರು ಪರಿಹಾರ ಕೊಡುತ್ತಾರೆ. ರಾಜ್ಯದಲ್ಲಿ ಬರ ಅಧ್ಯಯನ ಮಾಡಿ 3760 ಕೋಟಿ ಅನುದಾನ ಕೊಡುವಂತೆ ಕೇಂದ್ರಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ನಾಳೆ, ನಾಳಿದ್ದು ಕೇಂದ್ರ ಬರ ಅಧ್ಯಯನ ತಂಡ ಬರಲಿದೆ. ಕುಡಿಯುವ ನೀರಿಗೆ ಸಾಕಾಗುವಷ್ಟು ಅನುದಾನ ಕೊಟ್ಟಿದ್ದೇವೆ. ಒಂದು ತಿಂಗಳಿನಲ್ಲಿ ಹನೂರು ಭಾಗದಲ್ಲಿ140 ಬೋರ್‌ವೆಲ್ ಕೊರೆಸಲಾಗಿದೆ. ಕೆಲವು ಕಡೆ ಮೋಟಾ‌ರ್ ಅಳವಡಿಸಲಾಗಿದ್ದು, ಕೆಲವು. ಕಡೆ ಮೋಟಾರ್ ಅಳವಡಿಸಲಾಗುತ್ತಿದೆ. ಸುಮಾರು ಬೋರ್‌ಗಳಲ್ಲಿ ನೀರು ಬಂದಿಲ್ಲ. 48 ವಾಟ‌ರ್ ಟ್ಯಾಂಕ್‌ಗಳ ಮೂಲಕ ನೀರು ಕೊಡಲಾಗುತ್ತಿದೆ’ ಎಂದರು.
ಕರ್ನಾಟಕ ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್‌ ಪ್ರಭು, ಖಾಯಂ ಆಹ್ವಾನಿತ ಹೆಗ್ಗವಾಡಿಪುರ ಮಹೇಶ್‌ಕುಮಾರ್, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ತಾಲೂಕು ಅಧ್ಯಕ್ಷ ಮಲ್ಲಣ್ಣ, ಜ್ಯೋತಿಗೌಡನಪುರ ಸಿದ್ದರಾಜು ಹಾಗೂ ಪದಾಧಿ ಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *