- ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಸೇವಾ ಸೇತು ಅಭಿಯಾನಕ್ಕೆ ಚಾಲನೆ
ಚಾಮರಾಜನಗರ : ಕೇಂದ್ರ ಸರ್ಕಾರದ ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಸಲಹೆ ನೀಡಿದರು.
ನಗರದ ಶ್ರೀಚಾಮುಂಡೇಶ್ವರಿ ವಿದ್ಯುತ್ ನಿಗಮದ ಉಪ ವಿಭಾಗದ ಕಚೇರಿಯ ಮುಂಭಾಗದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿರುವ ಪಿಎಂ ಸೂರ್ಯ ಘರ್. ಉಚಿತ ವಿದ್ಯುತ್ ಯೋಜನೆಯ ಸೇವಾ ಸೇತು ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಈ ಯೋಜನೆಯಡಿಯಲ್ಲಿ ಮನೆ ಕಟ್ಟಡಗಳ ಖಾಲಿಛಾವಣೆಯ ಜಾಗವನ್ನು ಬಳಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಸೌರಶಕ್ತಿಯನ್ನು ಉತ್ಪಾದಿಸಬಹುದು. ಮಾಸಿಕ ವಿದ್ಯುತ್ ಬಿಲ್‌ಗಳಲ್ಲಿ ಉಳಿತಾಯ, ವಸತಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ಒದಗಿಸುತ್ತದೆ ಎಂದರು.
ಬ್ಯಾಂಕ್ ಮೂಲಕ ಸಾಲಸೌಲಭ್ಯ, ಸಬ್ಸಿಡಿ : ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಕೇಂದ್ರ ಸರ್ಕಾರದ ಮೂಲಕ ಸಬ್ಸಿಡಿ ನೀಡಲಾಗುತ್ತದೆ. ಗೃಹಬಳಕೆ ಗ್ರಾಹಕರಿಗೆ 1ರಿಂದ2 ಕಿ.ವ್ಯಾಟ್ ಸಾಮಾರ್ಥ್ಯ ದ ಸೌರ ಘಟಕಕ್ಕೆ 30 ಸಾವಿರದಿಂದ 60 ಸಾವಿರ ತನಕ ಸಬ್ಸಿಡಿ, 2ರಿಂದ 3 ಕಿ.ವ್ಯಾಟ್ ಸಾಮಾರ್ಥ್ಯದ ಸೌರ ಘಟಕಕ್ಕೆ 60 ಸಾವಿರದಿಂದ 78 ಸಾವಿರ ತನಕ ಸಬ್ಸಿಡಿ, 3 ಕಿ.ವ್ಯಾಟ್ ನಿಂದ ಮೇಲ್ಪಟ್ಟ ಸಾಮಾರ್ಥ್ಯದ ಸೌರಘಟಕಕ್ಕೆ 78 ಸಾವಿರ ಸಬ್ಸಿಡಿ ದೊರೆಯುತ್ತದೆ. ಬ್ಯಾಂಕ್ ಮೂಲಕ ಸಾಲಸೌಲಭ್ಯ ಇರುತ್ತದೆ. ಜಿಲ್ಲೆಯ ಇದರ ಸದುಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸೆಸ್ಕಾಂ ಇಇ ಟಿ.ಪ್ರದೀಪ್, ಎಇಇ ಮಹೇಶ್, ಧ್ರುಪದ್, ಎಇ ಗಳಾದಪ್ರವೀಣ್, ಪ್ರದೀಪ್, ನಾಗೇಂದ್ರ, ಮುದ್ದರಾಜು,ಜೆಇಗಳಾದ ನಂಜುಂಡಸ್ವಾಮಿ, ಮಹೇಶ್, ಚಂದ್ರನಾಯಕ, ಲೆಕ್ಕ ಸಹಾಯಕ ಮಂಜುನಾಥ್ ಇತರರು ಹಾಜರಿದ್ದರು.