- ಡಾ. ಶ್ರೀ ಬಿ. ಎಸ್. ಜ್ಞಾನಾನಂದ ಚನ್ನರಾಜೇ ಅರಸ್ ಸ್ವಾಮೀಜಿ ಅವರಿಂದ ಚಾಲನೆ
ಚಾಮರಾಜನಗರ: ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಅ.11 ರಿಂದ 19 ರವರೆಗೆ ಚಾಮರಾಜನಗರ ದಸರಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸ್ ಗೌಡ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಅಂದು ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಂಜೆ 5.30 ಕ್ಕೆ ಬೊಪ್ಪೇಗೌಡನಪುರದ ಶ್ರೀ ಜ್ಞಾನನಂದ ಚನ್ನ ರಾಜೇ ಅರಸ್ ಅವರು ಉದ್ಘಾಟಿಸಲಿದ್ದು, 9 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದರು.
2013 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಜಿಲ್ಲಾ ದಸರಾವನ್ನು ಮೊದಲ ಬಾರಿಗೆ ಆಯೋಜನೆ ಮಾಡಿದ್ದರು.ಬಳಿಕ ಅವರೇ ಕಳೆದ ದಸರಾ ಕಾರ್ಯಕ್ರಮವನ್ನು ನಿಲ್ಲಿಸಿದರು. ಆದ್ದರಿಂದ ಜಿಲ್ಲೆಯ ವಿವಿಧ ಸಂಘಟನೆಗಳು ಸ್ವತಃ ತಾವೇ ದಸರಾ ಆಚರಣೆ ಮಾಡಿದವು. ಅದರಂತೆ ಈ ವರ್ಷವು ಸಹ 9 ದಿನಗಳ ದಸರಾ ಆಯೋಜಿಸಲಾಗಿದೆ ಎಂದರು. ಉದ್ಯಮಿ ಶ್ರೀನಿಧಿಕುದರ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಾನಪದ ಕಲಾವಿದ ದೊಡ್ಡಗವಿ ಬಸಪ್ಪ, ಚಿತ್ರನಟ ಉಮ್ಮತ್ತೂರು ಬಸವರಾಜು, ಕನ್ನಡ ಸಂಘಟನೆ ಮುಖಂಡರಾದ ಚಾ.ಸಿ.ಸೋಮನಾಯಕ, ಮಂಗಲದ ಹೊಸೂರು ಶಿವಣ್ಣ, ರವಿಚಂದ್ರಪ್ರಸಾದ್ ಕಹಳೆ ಹಾಜರಿದ್ದರು.