ಚಾಮರಾಜನಗರದಲ್ಲಿ 4 ಕೋಟಿ ವೆಚ್ಚದ ವಿದ್ಯುತ್ ಚಿತಾಗಾರಕ್ಕೆ  ಶಾಸಕರಿಂದ ಗುದ್ದಲಿ ಪೂಜೆ

ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆ ಯ ಸಮೀಪದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ  ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
   ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು ಮಾತನಾಡಿ, ನಗರದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂತ್ಯಕ್ರಿಯೆಗೆ ಪೂರಕವಾದ ಆಧುನಿಕ ವ್ಯವಸ್ಥೆಯ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಜನರು ವಿದ್ಯುತ್ ಚಿತಾಗಾರಕ್ಕಾಗಿ ಬಹಳ ವರ್ಷಗಳಿಂದ ಮನವಿ ಮಾಡುತ್ತಿದ್ದರು. ಜನರ ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಅದರಂತೆ ಸರ್ಕಾರ 2025-26ನೇ ಸಾಲಿನ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಅಡಿಯಲ್ಲಿ  4 ಕೋಟಿ ರೂ. ಅನುದಾನವನ್ನು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಮಂಜೂರಾಗಿದ್ದು,
ಮುಂದಿನ ದಿನಗಳಲ್ಲಿ ಜನರ ಬೇಡಿಕೆಯಂತೆ
ವಿದ್ಯುತ್  ಚಿತಾಗಾರ ನಿರ್ಮಾಣ ಆಗಲಿದ್ದು,
ಪರಿಸರ ಸ್ನೇಹಿಯಾಗಿ ಶವಸಂಸ್ಕಾರ ಮಾಡಲು ಸಹಕಾರಿ ಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಕನಿಷ್ಠ ವೇತನಾ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಉಮೇಶ್ ಎಸ್ ಪಿಕೆ, ನಗರಸಭಾ ಮಾಜಿ ಉಪಾಧ್ಯಕ್ಷ ರಾಜಪ್ಪ, ಚೂಡಾ ಸದಸ್ಯರಾದ ಮಸಗಾಪುರರಾಜು, ಪುಟ್ಟಸ್ವಾಮಿ, ದ್ವಾರ್ಕಿ,ನಗರಸಭಾ ಪೌರಾಯುಕ್ತ ಪರಶುರಾಮ ಛಲವಾದಿ,  ಜೆಇ ಶಿವಶಂಕರ ಅರಾಧ್ಯ, ಅಪ್ಪಾಜಿ ಬಿಲ್ಡರ್ಸ್ ನ ಸತೀಶ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *