ಚಾಮರಾಜನಗರ ಜಿಲ್ಲಾ ಪಿಯು ಉಪನ್ಯಾಸಕರ ಸಂಘಕ್ಕೆ ನೂತನ ಪದಾಧಿಕಾರಿಗಳ  ಆಯ್ಕೆ

ಚಾಮರಾಜನಗರ: ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘಕ್ಕೆ 2026-31 ಸಾಲಿಗೆ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.
   ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ  ಭೌತಶಾಸ್ತ ಉಪನ್ಯಾಸಕ ಟಿ.ಮಧು, ಕಾರ್ಯಾಧ್ಯಕ್ಷರಾಗಿ – ಹನೂರು ತಾಲ್ಲೂಕು ಜಿ ವಿ ಗೌಡ ಕಾಲೇಜಿನ ನಂಜುಂಡಯ್ಯ,ಮಹಿಳಾ ಮೀಸಲು ಉಪಧ್ಯಾಕ್ಷೆಯಾಗಿ ಕೊಳ್ಳೇಗಾಲ ಎಸ್ ವಿ ಕೆ ಕಾಲೇಜಿನ ಧನಲಕ್ಷ್ಮೀ ,ಪ್ರಧಾನ ಕಾರ್ಯದರ್ಶಿಯಾಗಿ  ಆಲೂರಿನ ಸರ್ಕಾರಿ ಪದವಿಪೂರ್ವ ಕಾಲೇಜು,  ಆರ್. ಕೃಷ್ಣ ಮೂರ್ತಿ, ಖಜಾಂಚಿಯಾಗಿ ಸಂತೆಮರಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಮಹದೇವಪ್ರಭು, ಕಾರ್ಯದರ್ಶಿಯಾಗಿ  ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಶಿವರಾಮು, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಕುದೇರು ಸರ್ಕಾರಿ ಪದವಿಪೂರ್ವ ಕಾಲೇಜಿನ
ಡಾ. ಎಚ್.ಎಂ. ಮಣಿಕಂಠ, ಜಂಟಿ ಕಾರ್ಯದರ್ಶಿಯಾಗಿ  ಗುಂಡ್ಲುಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಮಹೇಶ್, ಸಂಚಾಲಕರಾಗಿ – ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಸವಣ್ಣ ಅವರು ಅವಿರೋಧವಾಗಿ ಆಯ್ಕೆಯಾದರು.ಸಂತೇಮರಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಿಯಶಂಕರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು

Leave a Reply

Your email address will not be published. Required fields are marked *