ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವು ವಿಶೇಷಚೇತನರಲ್ಲಿ ಹೊಸಚೈತನ್ಯ : ಶ್ರೀರೂಪ

  • ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ. 110 ಮಂದಿಗೆ ಕೃತಕ ಕೈ-ಕಾಲು ಜೋಡಣೆ
  • ರಾಮು ಅವರಿಂದ ರೋಟರಿಗೆ 1000 ಡಾಲರ್ ಕೊಡುಗೆ

ಚಾಮರಾಜನಗರ: ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ವತಿಯಿಂದ ಆಯೋಜಿಸಿರುವ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವು ವಿಶೇಷಚೇತನರಲ್ಲಿ ಹೊಸಚೈತನ್ಯ ಮೂಡಿಸುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ಭವನದಲ್ಲಿ ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಬೆಂಗಳೂರು ಇವರ ವತಿಯಿಂದ ನಡೆದ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ, ವಿಶೇಷಚೇತನರಿಗೆ ಕೃತಕ ಕೈ-ಕಾಲು ಜೋಡಣೆ ಮಾಡಿ ಮಾತನಾಡಿದರು.
  ಈ ಕಾರ್ಯಕ್ರಮವು ಒಂದು ಅರ್ಥಪೂರ್ಣ ಭಾಗವಾಗಿರುವುದು ಸಂತೋಷದ ವಿಷಯವಾಗಿದೆ. ಒಂದು ದೇಶ ಅಭಿವೃದ್ಧಿ ಆಗಬೇಕಾದರೆ ಒಂದು ರಸ್ತೆ, ಒಂದು ಉತ್ತಮ ಕಟ್ಟಡವಲ್ಲ ಸಮಾಜದಲ್ಲಿ ದುರ್ಬಲರಿಗೆ ಯಾವ ರೀತಿ ಸಹಾಯ ಮಾಡುತ್ತೇವೆ ಎಂಬುವುದು ದೊಡ್ಡ ವಿಷಯ. ಏಕೆಂದರೆ ದುರ್ಬಲ ವರ್ಗದವರನ್ನು ಗುರುತಿಸಿ ಕೃತಕ ಕೈ-ಕಾಲು ಜೋಡಣೆ ಮಾಡುತ್ತಿರುವುದು ಒಂದು ಅವಿಸ್ಮರಣೀಯವಾದದ್ದು ಎಂದು ರೋಟರಿ, ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷಚೇತನರಿಗೆ ಉಚಿತ ಕೈ-ಕಾಲು ಜೋಡಣೆಯಿಂದ ಅವರಲ್ಲಿ ಆತ್ಮವಿಶ್ವಾಸ, ಹೊಸಭವಿಷ್ಯ, ಹೊಸ ಜೀವನ, ಹೊಸ ಚೈತನ್ಯ ಬರುತ್ತದೆ. ಕೈ-ಕಾಲು ಜೋಡಣೆಯಿಂದ ಅವರು ತಮ್ಮ ಕಾಲಿನ ಮೇಲೆ ನಿಂತು ಕೆಲಸ ಮಾಡಬಹುದು. ಇಂತಹ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಜಿಲ್ಲಾ ಗೌರ್ನರ್ ಪಿ.ಕೆ.ರಾಮಕೃಷ್ಣ ಮಾತನಾಡಿ,.. ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ವತಿಯಿಂದ ಅಯೋಜಿಸಿರುವ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ಒಂದು ಅದ್ಭುತವಾದ ಕಾರ್ಯಕ್ರಮವಾಗಿದೆ. ರೋಟರಿ ಸಂಸ್ಥೆಯು ಇಂಟರ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಸಮಾಜದಲ್ಲಿ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ.ರೋಟರಿ ಅಧ್ಯಕ್ಷ ಚಂದ್ರಶೇಖರ್ ಅವರು ತಮ್ಮ ಅವಧಿಯಲ್ಲಿ 300 ಕಾರ್ಯಕ್ರಮಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದಾರೆ ಚಾಮರಾಜನಗರ ರೋಟರಿ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಮಿನಿ ಜಿಲ್ಲಾ ಗೌರ್ನರ್ ಯಶಸ್ವಿ ಸೋಮಶೇಖರ್ ಮಾತನಾಡಿ, ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಒಂದು ಸೇವಾ ಸಂಸ್ಥೆಯಾಗಿದ್ದು, ಕಳೆದ 120 ವರ್ಷಗಳಿಂದ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಗಡಿಜಿಲ್ಲೆಯಲ್ಲಿ ಸೇವಾ ಕಾರ್ಯಕ್ರಮ ಮಾಡುತ್ತಿದೆ. ಕೃತಕ ಕೈ-ಕಾಲು ಜೋಡಣೆಯೊಂದಿಗೆ ಕಡಿಮೆವೆಚ್ಚದಲ್ಲಿ ಡಯಾಲಿಸಸ್ ಮಾಡುತ್ತಿದೆ, ಅಲ್ಲದೆ ರಕ್ತದಾನ, ಉಚಿತ ಕಣ್ಣಿನ ತಪಾಸಣಾ ಶಿಬಿರ ಮಾಡುವ ಮೂಲಕ ರೋಟರಿ ಮೆರುಗು ಹೆಚ್ಚು ಮಾಡುತ್ತಿದೆ ಎಂದರು.
ರೋಟರಿ ಸಂಸ್ಥೆ ಮಾಜಿ ಜಿಲ್ಲಾ ಗೌರ್ನರ್
ಡಾ.ನಾಗಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಚಿತ ಕೃತಕ ಕೈ- ಕಾಲು ಶಿಬಿರಕ್ಕೆ 30 ಮಂದಿ ನಿರೀಕ್ಷೆ ಮಾಡಲಾಯಿತು. ಆದರೆ ನಿರೀಕ್ಷೆಗೂ ಮೀರಿ 115 ಮಂದಿ ಬಂದರು. ನಾವು ಈ ಕಾರ್ಯಕ್ರಮ. ರೂಪಿಸುವಾಗ 3 ಲಕ್ಷ ಆಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇವು ಆದರೆ ಆದರೆ ನಿರೀಕ್ಷೆಗೂ ಮೀರಿ ಬಂದದ್ದರಿಂದ 13 ಲಕ್ಷ ವೆಚ್ಚ ಆಯಿತು. ನಮ್ಮ ಮನವಿಗೆ ಸ್ಪಂದಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಎಂಎಸ್‌ಐಎಲ್ ವತಿಯಿಂದ 8 ಲಕ್ಷ ನೀಡಿದರು ಎಂದರು.
.ಡಯಾಲಿಸಸ್ ಏಕೆ ಆಗುತ್ತದೆ ಎಂಬುವುದರ ಬಗ್ಗೆ ಅರಿವು ಮೂಡಿಸಲು ಮುಂದಿನ ವರ್ಷ ಒಂದು ದೊಡ್ಡ ಕಾರ್ಯಕ್ರಮ ಮಾಡಲಾಗುತ್ತದೆ. ಅಲ್ಲದೆ 140 ದೂರದ ಕೊಯಮತ್ತೂರಿಗೆ ಹೋಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತದೆ. ಆಗಾಗಿ ಜಿಲ್ಲಾ ಕೇಂದ್ರದಲ್ಲಿ ಕಣ್ಣಿನ ಆಸ್ಪತ್ರೆ ತೆರೆದು ಇಲ್ಲಿಯ ಶಸ್ತ್ರಚಿಕಿತ್ಸೆ ಮಾಡಲು ರೋಟರಿ ಸಂಸ್ಥೆ ಚಿಂತನೆ ಆಗಿದೆ. ಆದ್ದರಿಂದ ಜಿಲ್ಲಾಡಳಿತ ಕೊಡಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ವತಿಯಿಂದ ಜಾಗ ಮಾಡಿದರು.
  ರೋಟರಿ ಅಧ್ಯಕ್ಷ ಚಂದ್ರುಶೇಖರ್ ಮಾತನಾಡಿ, ಕಳೆದ ಒಂದು ವರ್ಷದಿಂದ ರೋಟರಿ ಸಂಸ್ಥೆಯ ಹಳೆಯ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾ ಹಲವು ಹೊಸ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತೇನೆ. ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರವು 300ನೇ ಕಾರ್ಯಕ್ರಮವಾಗಿದೆ ಎಂದರು.
ರೋಟರಿ ಸದಸ್ಯ ರಾಮು ಅವರು ರೋಟರಿ ಸಂಸ್ಥೆಗೆ 1000 ಡಾಲರ್ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *