ಕಾಳಿಹುಂಡಿ ಶಿವಕುಮಾರ್ ರವರು ಸಂಗ್ರಹಿಸಿರುವ ಪುಸ್ತಕಗಳನ್ನು “ಮನೆಗೊಂದು ಗ್ರಂಥಾಲಯ ಅನುಷ್ಠಾನ” ಕಾರ್ಯಕ್ರಮದಡಿ ಉದ್ಘಾಟನೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ, ಮೈಸೂರು ವತಿಯಿಂದ "ಮನೆಗೊಂದು ಗ್ರಂಥಾಲಯ ಅನುಷ್ಠಾನ"- ಸಮಾರಂಭವನ್ನು ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ಕೂಡ ವಿಶೇಷವಾಗಿ ಹಮ್ಮಿಕೊಂಡು, ಪುಸ್ತಕ ಸಂಗ್ರಹಿಸಿರುವ ಪುಸ್ತಕ ಪ್ರೇಮಿಗಳನ್ನು ಪ್ರೋತ್ಸಾಹ ಮಾಡುತ್ತಿದ್ದು, ಇದೊಂದು ವಿಶಿಷ್ಟ ಜಾಗೃತಿ ಮಾಲಿಕೆ ಯಾಗಿದೆ. ಈ ಕಾರ್ಯಕ್ರಮವು ಈಗಾಗಲೇ ಮೈಸೂರಿನ ಹಲವು ಕಡೆ ಮನೆ, ಕಾಲೇಜು, ಕಚೇರಿ ಗಳಲ್ಲಿ ಅನಾವರಣಗೊಂಡಿದೆ.
         ಈ ಒಂದು ಕಾರ್ಯಕ್ರಮವು 14.06.2026 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜು, ಕಂದಾಯ ನಗರ, ಶ್ರೀರಾಂಪುರ, ಮೊದಲನೇ ಹಂತ, ಮೈಸೂರು ಇಲ್ಲಿ ನಡೆಯಲಿದೆ. 
      ಕಾಳಿಹುಂಡಿ ಶಿವಕುಮಾರ್ ರವರು ವಿವಿಧ ಲೇಖಕರು ಬರೆದಿರುವ, ಸಾಹಿತ್ಯದ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಸಂಗ್ರಹಿಸಿದ್ದು, ಆ ಪುಸ್ತಕಗಳನ್ನು ಇಡುವ ವ್ಯವಸ್ಥೆಯನ್ನು ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರು ಮಾಡಿದ್ದಾರೆ.      
      ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಂಶಿ ಪ್ರಸನ್ನ ಕುಮಾರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಕಾರ್ಯನಿರ್ವಾಹಕ ಸಂಪಾದಕರು, ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಮಾನಸ,  ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಇವರು ಸರ್ಕಾರ ವಹಿಸುವರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ರವಿ ಕೆ, ಪ್ರಾಂಶುಪಾಲರು, ಗೋವಿಂದರಾವ್ ಮೆಮೋರಿಯಲ್, ಪಿಯು ಕಾಲೇಜು, ಮೈಸೂರು ಹಾಗೂ ಕಣ್ಣೂರು ವಿ ಗೋವಿಂದಾ ಚಾರಿ, ನಿವೃತ್ತ ಹಿರಿಯ ಶುಶ್ರೂಷಕರು, ಆರ್ ಎಂ ಪಿ, ಮೈಸೂರು ರವರು ಭಾಗವಹಿಸುವರು.  
  ಈ ಕಾರ್ಯಕ್ರಮದಲ್ಲಿ ಆಶಯ ನುಡಿಯನ್ನು ಎಂ ಚಂದ್ರಶೇಖರ್, ಸಂಚಾಲಕರು, ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಿತಿ, ಮೈಸೂರು ಜಿಲ್ಲೆ, ಮಾಡುವರು. ಗೌರವ ಉಪಸ್ಥಿತಿಯಾಗಿ  ಕಾಳಿಹುಂಡಿ ಶಿವಕುಮಾರ್, ಲೇಖಕ, ಸಂಘಟಕ, ಪತ್ರಿಕೆ ಮತ್ತು ಪುಸ್ತಕ ಸಂಗ್ರಹಕ ಭಾಗವಹಿಸುವರು.
     ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು, ಸ್ನೇಹಿತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾಳಿಹುಂಡಿ ಶಿವಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *