- ಕೊತ್ತಲವಾಡಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ವಿಶ್ವಪರಿಸರ ದಿನಾಚರಣೆ
ಚಾಮರಾಜನಗರ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ, ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಅಭಿಯಾನಗಳು ನಡೆದಿವೆ. ಅವುಗಳು ದೇಶದ ಜನರಲ್ಲಿ ಪರಿಸರ ಜಾಗೃತಿ ಉಂಟು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡನೆಟ್ಟು ನೀರೆರೆದು ಮಾತನಾಡಿದರು.
ನರೇಂದ್ರಮೋದಿ ಅವರು ಮೊಟ್ಟಮೊದಲ ಪ್ರಧಾನಿಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಿದ ಮೇಲೆ ಒಂದು ದೃಢ ವಿರ್ಧಾರ ತೆಗೆದುಕೊಂಡು, ಸ್ವಚ್ಚಭಾರತ ಅಭಿಯಾನದ ಮೂಲಕ ಪರಿಸರ ಉಳಿಸಬೇಕು.
ಪರಿಸರ ಉಳಿದರೆ ಪ್ರತಿಯೊಬ್ಬರ ಜೀವನ ಉಳಿಯುತ್ತದೆ ಎಂಬ ಧ್ಯೇಯವಾಕ್ಯದಲ್ಲಿ ತಮ್ಮ ಆಡಳಿತ ಅರಂಭ ಮಾಡಿದರು.ದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪರಿಸರ, ಪ್ರತಿಯೊಬ್ಬರ ಗೌರವ ಕಾಪಾಡಬೇಕು ಎಂಬ ಉದ್ದೇಶನ್ನಿಟ್ಟುಕೊಂಡು ಸ್ವಚ್ಚಭಾರತ ಅಭಿಯಾನದಡಿಯಲ್ಲಿ ದೇಶದಲ್ಲಿ ಸುಮಾರು 12 ಕೋಟಿ ಗೂ ಹೆಚ್ಚು ಶೌಚಾಲಯ ನಿರ್ಮಿಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ ಕೀರ್ತಿ ನರೇಂದ್ರಮೋದಿ ಅವರಿಗೆ ಸಲ್ಲುತ್ತದೆ ಎಂದರು.
ಪ್ರಧಾನಿ ನರೇಂದ್ರಮೋದಿಯವರ ಆಶಯದಂತೆ
ಪ್ರತಿಯೊಬ್ಬರೂ ಒಂದೊಂದು ಗಿಡನೆಟ್ಟು ಪರಿಸರ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಕಾರ್ಯಕ್ರಮದ ಸಂಚಾಲಕ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ನಟರಾಜ್ ಗೌಡ,ಅರಕಲವಾಡಿ ನಾಗೇಂದ್ರ, ಸಾಹಿತಿ ಕೋಡಿಉಗನೆ ಮಂಜು,
ನಿಕಟಪೂರ್ವ ಅಧ್ಯಕ್ಷ ಅರಕಲವಾಡಿ ಮಹೇಶ , ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಮಾದಪ್ಪ ಕೊತ್ತಲವಾಡಿ, ಉಪಾಧ್ಯಕ್ಷ ಎಂ.ಎಸ್.ಮಹಾದೇವಸ್ವಾಮಿ, ಕಾರ್ಯದರ್ಶಿ ಮೋಹನ್ ಕುಮಾರ್, ನಾಗರಾಜು ಬಸಪ್ಪನಪಾಳ್ಯ,
ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ.ಕುಮಾರಸ್ವಾಮಿ , ಡಿ.ಮಂಜು, ಶಕ್ತಿಕೇಂದ್ರ ಅಧ್ಯಕ್ಷ ಶೇಖರ್,
ಇತರರು ಹಾಜರಿದ್ದರು.