ಚಾಮರಾಜನಗರ: ತಾಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಆಲ್ಟರ್ನಿಕ್ ಲಿಮಿಟೆಡ್ ನ ಸಿಎಸ್ ಆರ್ ಅನುದಾನದಡಿ ನಿರ್ಮಿಸಿರುವ ಬಸ್ ನಿಲ್ದಾಣ ವನ್ನು ಕಂಪನಿಯ ಜನರಲ್ ಮ್ಯಾನೇಜರ್ ಉಮೇಶ್ ಉದ್ಘಾಟಿಸಿದರು.
ಬಳಕ ಮಾತನಾಡಿ ಗ್ರಾಮಸ್ಥರು ಬೇಡಿಕೆಯಂತೆ ಕಂಪನಿಯ ಸಿಎಸ್ ಆರ್ ಅನುದಾನದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಸೇವಾ ಕಾರ್ಯಗಳನ್ನು ಕಂಪನಿ ವತಿಯಿಂದ ಮಾಡಲಾಗುವುದು ಎಂದರು.
ಗ್ರಾಮದ ಮುಖಂಡ ಮಲ್ಲೇಶ್ ಮಾತನಾಡಿ, ಆಲ್ಟರ್ನಿಕ್ ಲಿಮಿಟೆಡ್ ನ ಸಿಎಸ್ ಆರ್ ಅನುದಾನದಡಿಯಲ್ಲಿ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿಕೊಡುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಿಸಿಲು, ಮಳೆಯಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳ ಚಾಮರಾಜನಗರ, ಮೈಸೂರು ಕಾಲೇಜು, ಆಸ್ಪತ್ರೆ, ಇನ್ನಿತರ ಕೆಲಸಕ್ಕಾಗಿ ಬಸ್ ಹೋಗಲು ನಿಲ್ಲಬೇಕಾದ ಪರಿಸ್ಥಿತಿ ಇತ್ತು ಅದನ್ನು ಕಂಪನಿ ಮನಗಂಡು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿರುವುದು ತುಂಬಾ ಉಪಯೋಗವಾಗಿದೆ.ಗ್ರಾಮಸ್ಥರ ಪರವಾಗಿ ಕಂಪನಿಯವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕಂಪನಿಯ ಸಿಎಸ್ ಆರ್ ಮುಖ್ಯಸ್ಥ ಕಣ್ಣನ್, ಸುದೀಂದ್ರ, ತಾ.ಪಂ.ಮಾಜಿ ಸದಸ್ಯ ಬಸವಣ್ಣ ದೀಪ್ತಿ ಡೆವಲಪರ್ಸ್ ಜಗದೀಶ್, ಲೋಕೇಶ್, ನಾಗರಾಜಮೂರ್ತಿ, ಕುಮಾರ್, ಶಿವಪಾದಪ್ಪ, ನಂಜುಂಡಸ್ವಾಮಿ, ಮಹೇಶ್,ಮಹೇಶ್, ಮುಕುಂದಮೂರ್ತಿ, ರಾಜಮ್ಮ ಹಾಜರಿದ್ದರು.