ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜೇಶ್ವರಸ್ವಾಮಿಗೆ ವಿಶೇಷಪೂಜೆ

ಚಾಮರಾಜನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ  ಅವರ ಅಭಿಮಾನಿಗಳ ಬಳಗದ ವತಿಯಿಂದ ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
   ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅವರ ನೇತೃತ್ವದಲ್ಲಿ
ಚಾಮರಾಜೇಶ್ವರ ದೇವಾಲಯದಲ್ಲಿ
ವಿಶೇಷ ಕುಂಕುಮ ಅರ್ಚನೆ ನೆರವೇರಿಸಿ ವಿಶೇಷಪೂಜೆ ಸಲ್ಲಿಸಿದ ಅಭಿಮಾನಿಗಳು ಕೈಯಲ್ಲಿ ಡಿಕೆ ಶಿವಕುಮಾರ್ ಫೋಟೊ ಹಿಡಿದು, ಈಡುಗಾಯಿ ಒಡೆದು, ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಜಯವಾಗಲಿ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
  ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪುಟ್ಟಸ್ವಾಮಿ ಗೌಡ ಮಾತನಾಡಿ, ನಮ್ಮ ನೆಚ್ಚಿನ ನಾಯಕ ಕನಕಪುರ ಬಂಡೆ, ಒಕ್ಕಲಿಗರ ಸಮುದಾಯದ ಹುಲಿ  ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ಹಿಂದೆ ಚುನಾವಣಾ ಪೂರ್ವ ಸಂದರ್ಭದಲ್ಲಿ ಚಾಮರಾಜೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಲಾಗಿತ್ತು. ಈಗ ಅವರು ಯಶಸ್ವಿಯಾಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವಂತೆ ಪ್ರಾರ್ಥಿಸಲಾಯಿತು ಎಂದರು.
ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಎಲ್ಲ  ಜಾತಿ, ಧರ್ಮಗಳೊಂದಿಗೆ ಉತ್ತಮ ಬಾಂದವ್ಯವಿಟ್ಟುಕೊಂಡಿದ್ದಾರೆ. ಹಿಂದುತ್ವ ಪ್ರತಿಪಾದನೆ ಮಾಡುವವರು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿನ್ನುಮುತ್ತು, ರಘು, ಸೋಮಶೇಖರ, ಮಾದೇಶ್, ಕೇಬಲ್ ರಘು, ಪಣ್ಯದಹುಂಡಿ ರಾಜು, ಶ್ರೀನಿವಾಸಗೌಡ, ರವಿಚಂದ್ರಪ್ರಸಾದ್, ನಿಜಧ್ವನಿ ಗೋವಿಂದರಾಜು, ಗಂಗವಾಡಿ ಮರಿಸ್ವಾಮಿ, ಮನೋಜ್, ಸಿದ್ದಲಿಂಗೇಗೌಡ, ಸುಬ್ಬಯ್ಯ, ಚಿಕ್ಕನಾಯಕ, ಲೋಕೇಶ್, ನಾಗರಾಜು , ಸಿ.ಕೆ. ರವಿಕಮಾರ್ , ಸುರೇಶ್, ಈರಣ್ಣ, ಗೋವಿಂದ ಗೌಡ, ಚಿನ್ನಸ್ವಾಮಿ, ಮಹೇಶ್ಗೌಡ, ಪ್ರಕಾಶ್, ರಾಜಪ್ಪ ,ನಾಗೇಂದ್ರ ಗೌಡ, ಸೋಮಣ್ಣ, ರವಿಗೌಡ, ಮಹೇಶ್, ಅರುಣಕುಮಾರ್ ಗೌಡ, ನಾಗರಾಜು,  ಹಾಜರಿದ್ದರು.

Leave a Reply

Your email address will not be published. Required fields are marked *