ಚಾಮರಾಜನಗರ: ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 19ರಂದು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಗಾಯಕರಿಂದ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲೆಯ ಜನತೆಗೆ ಸಂಗೀತ ರಸದೌತಣ ದೊರೆಯಲಿದೆ.
ಅಕ್ಟೋಬರ್ 19ರಂದು ಖ್ಯಾತ ಗಾಯಕರಾದ ರಘುದೀಕ್ಷಿತ್ ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್ ಮತ್ತು ಬಿಗ್ಬಾಸ್ ವಿಜೇತ ಹನುಮಂತು ಮತ್ತು ತಂಡದವರಿಂದ ಜಾನಪದ ವೈಭವ ಕಾರ್ಯಕ್ರಮ ಆಕರ್ಷಣೆಯಾಗಿದೆ.