ತುಮಕೂರು : ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ, ತುಮಕೂರು ಇವರ ವತಿಯಿಂದ ಆಯೋಜಿಸಿದ್ದ ನಮ್ಮ ಜೇನುಗೂಡು ಬಳಗ ನಡೆಸಿ ಕೊಟ್ಟ ಕಾರ್ಯಕ್ರಮದಲ್ಲಿ ಸಾವಿತ್ರಿ ರಾಮಚಂದ್ರ ಬ್ಯಾನರ್ ಅವರ ‘ಗುಲಾಬಿ’ ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಅಡ್ವೊಕೇಟ್ ಡಾ. ಆರ್. ವಿಜಯಕುಮಾರ್ ನಿರ್ದೇಶಿಸಿ ನಾಯಕರಾಗಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನೇಮಾ ‘ಗುಲಾಬಿ’ ಪೋಸ್ಟರನ್ನು ಜೇನುಗೂಡು ಬಳಗದ ಅಧ್ಯಕ್ಷ ಸೆಲ್ವಮ್ ಮತ್ತು ತಂಡದವರು ಬಿಡುಗಡೆ ಮಾಡಿದರು.
ಚಿತ್ರದ ನಾಯಕರಾದ ಹ್ಯಾಟ್ರಿಕ್ ನಿರ್ದೇಶಕ, ನಿರ್ಮಾಪಕ, ನಟ ಡಾ. ಆರ್ ವಿಜಯಕುಮಾರ್, ನಾಯಕಿ ಅನಿತಾಶ್ರೀ, ಸಹ ನಿರ್ದೇಶಕ ವಾಸುದೇವ್ ಶೆಟ್ಟಿ ಮತ್ತು ಚಿತ್ರ ತಂಡದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಡಾ. ಅರ್ ವಿಜಯಕುಮಾರ್ ಅವರನ್ನು ಗೌರವ ಪೂರ್ವಕ ಸನ್ಮಾನಿಸಲಾಯಿತು. ನಂತರ ಮಾತನಾಡಿದ ವಿಜಯಕುಮಾರ್ ಅವರು ’ಗುಲಾಬಿ’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ, ತಾತಗುಣಿ, ಭೂಮಿಕಾ ಸ್ಟುಡಿಯೋ, ಕನಕಪುರ ಸುತ್ತಮುತ್ತ ನಡೆಸಲಾಗಿದ್ದು, ಆರು ಹಾಡುಗಳು, ಆರು
ಸಾಹಸ ದೃಶ್ಯಗಳಿವೆ. ಈಗಾಗಲೇ ನನ್ನ ದೊಡ್ಡಣ್ಣ ಪುಟ್ಟಣ್ಣ, ರಕ್ಷಕ ಮತ್ತು ರಕ್ಷಕ-2 ಮೂರು ಚಿತ್ರಗಳು ಶತದಿನೋತ್ಸವ ಆಚರಿಸಿದ್ದು ಇದಕ್ಕೆಲ್ಲ ಪ್ರೇಕ್ಷಕರ
ಪ್ರೋತ್ಸಾಹವೇ ಕಾರಣ. ಶೀಘ್ರದಲ್ಲೇ ಈ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದರು.
‘ಗುಲಾಬಿ’ ಚಿತ್ರದಲ್ಲಿ ನಾಯಕರಾಗಿ ಡಾ.ವಿಜಯಕುಮಾರ್, ರಾಧಿಕಾ, ಚಂದನಾ, ಅನಿತಾಶ್ರೀ, ನಾಗೇಂದ್ರ ಅರಸ್, ಲಯಕೋಕಿಲ, ಉಗ್ರಂ ರವಿ, ಬಿಗ್‌ಬಾಸ್ ಮಲ್ಲಮ್ಮ,ಸುರೇಂದ್ರ ಕುಮಾರ್, ಅಜಿತ್‌ಜೈನ್, ಲೋಕೇಶ್ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವೀರೇಶ, ಸಂಗೀತ ಸಂತೋಷ ಜೋಶ್ವ, ಪ್ರಸಾಧನ ನಾಗೇಶ, ಕೊರಿಯೋಗ್ರಫಿ ಬಾಲಕೃಷ್ಣ, ಸಾಹಸ ಗುಲಾಬಿ ಚಿನ್ನಯ್ಯ, ಸಂಕಲನ ನಿಸಿತ್, ಪಿಆರ್‌ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ವಾಸುದೇವ ಶೆಟ್ಟಿ ಎಚ್.ಎಸ್, ಸಹನಿರ್ದೇಶನ ಎಸ್.ಮೇಘರಾಜ ಗೌಡ, ನಿರ್ಮಾಣ ಉಸ್ತುವಾರಿ, ವಸ್ತ್ರವಿನ್ಯಾಸ ಅನಿತಾಶ್ರೀ, ಕಥೆ-ಚಿತ್ರಕಥೆ- ಸಂಭಾಷಣೆ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಡಾ.ವಿಜಯಕುಮಾರ್ ಹೊತ್ತಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬