ಶ್ರೀ ವಿನಾಯಕ ಭಕ್ತ ಮಂಡಳಿಯ ಗಣಪತಿ ವಿಸರ್ಜನೋತ್ಸವ

ಚಾಮರಾಜನಗರ : ತಾಲೂಕಿನ ಹರದನಹಳ್ಳಿ ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕಳೆದ 16 ವರ್ಷಗಳಿಂದ ಪ್ರತಿಷ್ಠಾಪಿಸಿರುವ ಶ್ರೀ ವಿನಾಯಕ ಭಕ್ತ ಮಂಡಳಿಯ ಗಣಪತಿ ವಿಸರ್ಜನೋತ್ಸವ ಮಿನಿ ದಸರಾ ಸಂಭ್ರಮದಂತೆ ಜರುಗಿತು.
ಇಡೀ ಗ್ರಾಮದಲ್ಲಿ ತಳಿರು ತೋರಣಗಳಿಂದ ವಿಶೇಷವಾಗಿ ಅಲಂಕೃತಗೊಂಡ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜ, ಜನಪದ ತಂಡಗಳು, ನಾದಸ್ವರ, ನಗಾರಿ , ಬ್ಯಾಂಡ್, ಜಾನಪದ ನೃತ್ಯ,ವಿಶೇಷವಾಗಿ ಕಲಾವಿದ ರಾಮು ನಿರ್ಮಿಸಿದ್ದ ಜಂಬೂ ಸವಾರಿ ಆನೆ ಮತ್ತು ನವ ದುರ್ಗೆಯರ ಪ್ರದರ್ಶನ, ಯಕ್ಷಗಾನ, ವೀರಭದ್ರಕುಣಿತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆಯಿತು. ಅಂತಿಮವಾಗಿ ಹರದನಹಳ್ಳಿ ಕಲ್ಯಾಣಿಯಲ್ಲಿ ತೆಪ್ಪೋತ್ಸವದೊಂದಿಗೆ ಬಾಣ ಬಿರಿಸು, ವಿದ್ಯುತ್ ಅಲಂಕಾರ ಮೂಲಕ ವಿಸರ್ಜಿಸಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ಗಣಪತಿಯ ವಿಸರ್ಜನಾ ಉತ್ಸವ ಕಾರ್ಯಕ್ರಮವನ್ನು ಭಕ್ತರು ವೀಕ್ಷಿಸಿ ಧನ್ಯರಾದರು.
ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ವಿಶೇಷವಾಗಿ ಮೈಸೂರಿನ ಇಸ್ಕಾನ್ ಶ್ರೀ ರಾಧಾಕೃಷ್ಣ ಮಂದಿರದ ಗುರುಗಳಾದ ನರಹರಿ ಠಾಕೂರ್ ದಾಸ್, ಅಮಲಾತ್ಮದಾಸ್ ಮತ್ತು ಜಯಾನಂದ ದಾಸ್ ರವರ ನೇತೃತ್ವದಲ್ಲಿ ವಿಶೇಷ ಸಂಕೀರ್ತನೆಯನ್ನು ಏರ್ಪಡಿಸಲಾಗಿತ್ತು.
ನೂರಾರು ಯುವಕರು ಗಣಪತಿ ಮತ್ತು ಶ್ರೀ ಕೃಷ್ಣನ ಸಂಕೀರ್ತನೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಉತ್ಸವಕ್ಕೆ ಚಾಲನೆ ನೀಡಿದ ಇಸ್ಕಾನ್ ಸಂಸ್ಥೆಯ ಶ್ರೀ ರಾಧಾಕೃಷ್ಣ ಮಂದಿರದ ಗುರುಗಳಾದ ನರಹರಿ ಠಾಕೂರ್ ದಾಸ್ ರವರು ಹರದನಹಳ್ಳಿ ಯುವಕರು ಮಾದರಿಯಾದವರು.
ಆಧ್ಯಾತ್ಮದ ಮಾರ್ಗದಲ್ಲಿ ಗ್ರಾಮದ ಜನರಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ಸರ್ವರನ್ನು ಧರ್ಮ ಜಾಗೃತಿ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಪ್ರತಿಯೊಬ್ಬರು ನಾಮ ಸಂಕೀರ್ತನೆಯನ್ನು ಮಾಡುವ ಮೂಲಕ ಜೀವನವನ್ನು ಪವಿತ್ರ ಗೊಳಿಸಿ ಕೊಳ್ಳೋಣ. ಯುವಕರು ಮತ್ತು ವಿದ್ಯಾರ್ಥಿಗಳು ಒಳ್ಳೆಯ ಮಾರ್ಗದಲ್ಲಿ ಮುನ್ನಡೆ ಸಾಗಲಿ. ಗಣಪತಿ ಉತ್ಸವಗಳು ನಮ್ಮೆಲ್ಲರಿಗೂ ಹೊಸ ಶಕ್ತಿಯನ್ನು ಉತ್ಸಾಹವನ್ನು ತುಂಬುತ್ತದೆ.ಸಂಕೀರ್ತನೆಯನ್ನು ಮಾಡುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡಬೇಕು. ಕಲಿಯುಗದಲ್ಲಿ ಪ್ರತಿಯೊಬ್ಬರು ಭಗವಂತನ ನಾಮ ಉಚ್ಚಾರಣೆಯನ್ನು ಮಾಡುವ ಮೂಲಕ ಆನಂದವನ್ನು ಪಡೋಣ ಎಂದು ತಿಳಿಸಿ ವಿನಾಯಕ ಭಕ್ತ ಮಂಡಳಿ ಎಲ್ಲಾ ಕಾರ್ಯಗಳಲ್ಲೂ ಮುನ್ನಡೆ ಸಾಧಿಸಲಿ. ಭಗವಂತನ ಆಶೀರ್ವಾದ ಮತ್ತು ಗ್ರಾಮಸ್ಥರ ಸಹಕಾರ ಸದಾ ಇರಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರಕಲವಾಡಿ ಸೋಮ ನಾಯಕ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ, ಬಜಾಜ್ ಪಟೇಲ್ ಮಾಲೀಕರಾದ ಹೊನ್ನಳ್ಳಿ , ವೃಷಭೇಂದ್ರಪ್ಪ, ಆಚಾರ್ಯರಾದ ಪ್ರದೀಪ್ ಕುಮಾರ್ ದೀಕ್ಷಿತ್, ವೆಂಕಟಯ್ಯನ ಛತ್ರದ ಶಮಿತ್ ಕುಮಾರ್, ಶ್ರೀ ಶಾರದಾ ಭಜನ ಭಕ್ತ ಮಂಡಳಿ ಸದಸ್ಯರು, ವಿನಾಯಕ ಭಕ್ತ ಮಂಡಳಿಯ ಯುವ ಸಮೂಹ ಗ್ರಾಮದ ಎಲ್ಲಾ ಕೋಮಿನ ಯಜಮಾನರು, ಗ್ರಾಮಸ್ಥರು ಉಪಸ್ಥಿತರಿದ್ದು ಶುಭ ಕೋರಿದರು.

Leave a Reply

Your email address will not be published. Required fields are marked *