ಚಾಮರಾಜನಗರ: ರಂಗಭೂಮಿ ಕಲೆ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕಲಾವಿದ ಉಮ್ಮತ್ತೂರು ಬಸವರಾಜು ಹೇಳಿದರು.
ತಾಲೂಕಿನ ಉಮ್ಮತ್ತೂರು ಗ್ರಾಮದ ಶ್ರೀಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಗೆಳೆಯರ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಶನೇಶ್ವರಸ್ವಾಮಿಯ ವಿಶೇಷ ಪೂಜಾ ಮಹೋತ್ಸವ ಅಂಗವಾಗಿ ನಡೆದ ರಂಗಗೀತೆ, ಭಕ್ತಿಗೀತೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಂಗಭೂಮಿ ಕ್ಷೇತ್ರ ಉಳಿಸಿ ಬೆಳೆಸಲು ನಿರಂತರ ಚಟುವಟಿಕೆಗಳು ನಡೆಯಬೇಕು. ಯುವಪೀಳಿಗೆ ರಂಗಭೂಮಿ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾರ್ವಜನಿಕರು ನಾಟಕ ವೀಕ್ಷಿಸುವ ಮೂಲಕ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ತಾ.ಪಂ.ಮಾಜಿ ಸದಸ್ಯೆ ಸುಧಾಮಲ್ಲಣ್ಣ ಮಾತನಾಡಿ. ಚಾಮರಾಜನಗರ ಜಿಲ್ಲೆಯು ಕಲೆಗಳ ತವರೂರಾಗಿದೆ. ಜಿಲ್ಲೆಯ ಕಲಾವಿದರಪೋತ್ಸಾಹಿಸುವ ಕೆಲಸ ಆಗಬೇಕು ಎಂದರು.
ಶ್ರೀಶನೇಶ್ವರಸ್ವಾಮಿ ದೇವಸ್ಥಾನ ಆರ್ಚಕ ಭಾನುಪ್ರಕಾಶ್ ಉದ್ಘಾಟಿಸಿದರು. ಪಿಎಸಿಸಿಬಿ ಅಧ್ಯಕ್ಷ ಸಹಕಾರ ಸಂಘದ ನಾಗೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಸಹಕಾರ ಅಧ್ಯಕ್ಷ ಸಿದ್ದಪ್ಪ ಇತರರು ಹಾಜರಿದ್ದರು.