- ಭೋಗಾಪುರದ ಪ.ಜಾ/ಪ.ಪಂ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯಸೇವಾ ಯೋಜನೆ, ಯುವ ರೆಡ್‌ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಚಾಮರಾಜನಗರ: ವಿದ್ಯಾರ್ಥಿಗಳು ಪುಸ್ತಕ ಜ್ಞಾನದೊಂದಿಗೆ ಲೌಕಿಕ ಜ್ಞಾನವನ್ನೂ ಪಡೆದುಕೊಳ್ಳುವುದು ಜೀವನದ ಯಶಸ್ಸಿಗೆ ಅತ್ಯಂತ ಅಗತ್ಯವಾಗಿದೆ ಎಂದು ಮೈಸೂರು ಹಿರಿಯ ಉದ್ಯೋಷಕರು, ಮೈಸೂರು ಆಕಾಶವಾಣಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಉಮೇಶ್ ಹೇಳಿದರು.
ತಾಲೂಕಿನ ಭೋಗಾಪುರದ ಪ.ಜಾ/ಪ.ಪಂ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
ಮಾತೆ ಸಾವಿತ್ರಿಬಾಯಿ ಫುಲೆ ಸಭಾಂಗಣದಲ್ಲಿ ನಡೆದ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯಸೇವಾ ಯೋಜನೆ, ಯುವ ರೆಡ್‌ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿದ್ದು ಒಳ್ಳೆಯ ಪುಸ್ತಕಗಳನ್ನು ಬರಬೇಕು. ಕೇವಲ ಪುಸ್ತಕ ಓದುವುದರಿಂದ ನಮಗೆ ಮಾಹಿತಿ ಸಿಗಬಹುದು, ಆದರೆ ಆ ಮಾಹಿತಿಯನ್ನು ನಿಜ ಜೀವನದಲ್ಲಿ ಹೇಗೆ ಬಳಸಬೇಕು ಎಂಬುದನ್ನು ಲೌಕಿಕ ಜ್ಞಾನ ಕಲಿಸಿಕೊಡುತ್ತದೆ ಎಂದರು.
ನೀವು ಶ್ರಮವಂತರಾಗಬೇಕು, ಸ್ವಾಭಿಮಾನಿಯಾಗಬೇಕು.ಶಿಕ್ಷಣ ಬಹಳ ಮುಖ್ಯ. ನೈತಿಕ ಶಿಕ್ಷಣ . ಒಳ್ಳೆಯ ನಡೆತೆ, ಗುಣ ಆಚಾರ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಬೇಕು.
ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗಬಾರದು ಭತ್ತ ಬೆಳೆಯುವ ಭೂಮಿಗಳಾಗಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ನಿಜವಾದ ಶಿಕ್ಷಣ ದತ್ತ ಮುಖ ಮಾಡಬೇಕು. ವಿದ್ಯಾರ್ಥಿ ಜೀವನವನ್ನು ಸರಿಯಾಗಿ ಬಳಸಿಕೊಂಡು ಸುವರ್ಣಯುಗ ಮಾಡಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಾಗೇಂದ್ರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರಿಂದ ಕಾಲೇಜಿಗೆ ಎಲ್ಲ ಮೂಲಭೂತ ಸೌಕರ್ಯಗಳ ಕಲ್ಪಿಸಿಕೊಡಲಾಗುವುದು. ಕಾಲೇಜಿನಲ್ಲಿ ಕೆಎಎಸ್, ಐಎಎಸ್ ಕೋಚಿಂಗ್ ಸೆಂಟರ್ ಮಾಡಲಿಸಲಾಗುವುದು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದಕಾಲೇಜ್ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯು ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯಸೇವಾ ಯೋಜನೆ, ಯುವ ರೆಡ್‌ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟನೆಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಕೆಗಳನ್ನು ಪಾಲ್ಗೊಳ್ಳಬೇಕು ಎಂಬ ಆಶಯದೊಂದಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೇದಿಕೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನೆ ಸಂಚಾಲಕ ಪ್ರೊ.ಎಂ. ನಂಜುಂಡಯ್ಯ, ಐಕ್ಯೂ ಎಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಪ್ರೊ. ಆರ್.ರಂಗಸ್ವಾಮಿ, ರೇಂಜರ್ಸ್ ಮತ್ತು ರೋವರ್ಸ್ ಘಟಕ ಸಂಚಾಲಕ ಡಾ.ವಿ.ಆರ್. ರಮೇಶ್ ಬಾಬು, ಯುವ ರೆಡ್‌ಕ್ರಾಸ್ ಘಟಕ ಸಂಚಾಲಕ ಪ್ರೊ. ಬಿ.ಎಂ. ಶಿವಕುಮಾರ್, ಉದ್ಯೋಗ ಮಾರ್ಗದರ್ಶನ ಕೋಶ ಸಂಚಾಲಕ ಪ್ರೊ. ಟಿ.ಆರ್.ಗಿರೀಶ್,ಮಹಿಳಾ ದೌರ್ಜನ್ಯ ತಡೆ ಮತ್ತು ಸಮಾಲೋಚನಾ ಸಮಿತಿ ಸಂಚಾಲಕಿ ನೇತ್ರಾವತಿ, ಉಪನ್ಯಾಸಕಿಯರಾದ ಯಶೋಧ, ಕೀರ್ತನ, ಪವಿತ್ರ, ನಾಗರಾಜು, ಶಿಕ್ಷಣ ನಿರ್ದೇಶಕ ಕೆ.ಕೆ.ಪ್ರತಾಪ್ ಸಾಂಸ್ಕೃತಿಕ ವೇದಿಕೆ ವಿದ್ಯಾರ್ಥಿ ಅಧ್ಯಕ್ಷ ಎಂ. ಮಹೇಂದ್ರ, ಕಾರ್ಯದರ್ಶಿ ಎಂ.ಪೂಜಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.