ಶಾಸಕ ಎ.ಆರ್.ಕೃಷ್ಣಮೂರ್ತಿ, ಮುಸ್ಲಿಂ ಸಮುದಾಯದ ನಡುವೆ ಯಾವುದೇ ವೈಮನಸ್ಸು ಇಲ್ಲ : ಹಬೀಬ್ ಪಾಷ

  • ಶಾದಿಮಹಲ್ ಹೆಚ್ಚುವರಿಯಾಗಿ 1 ಕೋಟಿ ರೂ. ಸಿಎಂ, ಎಆರ್‌ಕೆಗೆ ಮುಸ್ಲಿಂ ಸಮುದಾಯದಿಂದ ಅಭಿನಂದನೆ

ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಮುಸ್ಲಿಂ ಸಮುದಾಯ ನಡುವೆ ಯಾವುದೇ ವೈಮನಸ್ಸು ಇಲ್ಲ. ಅವರಿಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಅಂಜುಮನ್ ಇಸ್ಲಾಮಿಯ ಸಂಸ್ಥೆ ಅಧ್ಯಕ್ಷ ಹಬೀಬ್
ಪಾಷ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೊಳ್ಳೇಗಾಲದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ 1ಕೋಟಿ ರೂ. ಮಂಜೂರು ಮಾಡಿದರು.

ಅದರಲ್ಲಿ 50 ಲಕ್ಷ ರೂ. ಬಿಡುಗಡೆಯಾಗಿತು. ಇನ್ನೂ ಉಳಿದ 50 ಲಕ್ಷ ಬಿಡುಗಡೆಗೆ ವಿಳಂಬವಾದಕ್ಕೆ ಶಾಸಕರು, ಅಂಜುಮನ್ ಸಂಸ್ಥೆ, ಮುಸ್ಲಿಂ ಸಮುದಾಯದವರ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಿತು. ಸಮುದಾಯದ ಮುಖಂಡರು, ಶಾಸಕರು ಮಾತುಕತೆ ನಡೆಸಿದಾಗ ನನ್ನ ಅವಧಿಯಲ್ಲಿ ಶಾದಿಮಹಲ್ ಪೂರ್ಣಗೊಳಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದು ಅಲ್ಲದೆ ಶಾದಿಮಹಲ್‌ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರನ್ನು ಕರೆದುಕೊಂಡು ಬಂದು ಪರಿಶೀಲಿಸಿ ಹೆಚ್ಚು ವರಿಯಾಗಿ 1 ಕೋಟಿ ಅನುದಾನ ಕೊಡುವುದಾಗಿ ಘೋಷಣೆ ಮಾಡಿಸಿದ್ದಾರೆ. ಇದು ಸಮುದಾಯದಲ್ಲಿ ಸಂತಸ ಉಂಟು ಮಾಡಿದೆ. ಸಮುದಾಯದವರೆಲ್ಲ ಒಗ್ಗಟ್ಟಿನಿಂದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರ ಶಕ್ತಿ ಬಲಪಡಿಸಿ ಸಂಪೂರ್ಣ ಸಹಕಾರ ನೀಡಿ ಅವರನ್ನು ಬೆಂಬಲಿಸುವುದಾಗಿ ಹೇಳಿದರು.

ಸಿಎಂ, ಎಆರ್‌ಕೆಗೆ ಅಭಿನಂದನೆ : ಶಾದಿಮಹಲ್‌ಗೆ ಹೆಚ್ಚುವರಿಯಾಗಿ 1 ಕೋಟಿ ರೂ. ಅನುದಾನ ಘೋಷಣೆ ಮಾಡಿದ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಮುಸ್ಲಿಂ ಸಮುದಾಯದ ಪರವಾಗಿ ಈ ಮೂಲಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಜುಮನ್ ಇಸ್ಲಾಮಿಯಾ ಸಂಸ್ಥೆ ಖಜಾಂಚಿ ಜಬಿವುಲ್ಲಾ, ನಿರ್ದೇಶಕ ಸಾಧಿಕ್ ಪಾಷ, ಸದಸ್ಯ ವಸೀಂಪಾಷ, ಮಹಮದ್ ಅತಿಕ್ ಪಾಷ,  ಗ್ರಾ.ಪಂ.ಮಾಜಿ ಸದಸ್ಯ ಮುಜು ಮಾಂಬಳ್ಳಿ, ನಗರಸಭಾ ಮಾಜಿ ಸದಸ್ಯ ಅನ್ಸರ್ ಬೇಗ್,  ಅಲ್ಪಸಂಖ್ಯಾತ ವಿಭಾಗ ಬ್ಲಾಕ್  ಅಧ್ಯಕ್ಷ  ಮನ್ಸೂರ್ ಪಾಷ ಹಾಜರಿದ್ದರು.

Leave a Reply

Your email address will not be published. Required fields are marked *