- ಹರವೆಯಲ್ಲಿ ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ
ಚಾಮರಾಜನಗರ : ಗುಂಡ್ಲುಪೇಟೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಹರವೆ ಗ್ರಾಮದಲ್ಲಿ ಬದನವಾಳು ರಾಷ್ಟ್ರೀಯ ಹೆದ್ದಾರಿ 150ರಿಂದ ವೀರನಪುರ ಗೇಟ್ (ಎಸ್‌ಹೆಚ್ 81)ನ್ನು ಸಂಪರ್ಕಿಸುವ ( ರಾಜ್ಯ ಹೆದ್ದಾರಿ 301) ರಸ್ತೆ ಮಾರ್ಗ ಬಸವಟ್ಟಿ-ಹೆಮ್ಮರಗಾಲ-ಕೆಬ್ಬೇಪುರ- ಕುಲಗಾಣ ರಸ್ತೆನ.23.30 ನಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಬದನವಾಳು ರಾಷ್ಟ್ರೀಯ ಹೆದ್ದಾರಿ 150ರಿಂದ ವೀರನಪುರ ಗೇಟ್ (ಎಸ್‌ಹೆಚ್ 81)ನ್ನು ಸಂಪರ್ಕಿಸುವ ( ರಾಜ್ಯ ಹೆದ್ದಾರಿ 301) ರಸ್ತೆ ಮಾರ್ಗ ಬಸವಟ್ಟಿ-ಹೆಮ್ಮರಗಾಲ-ಕೆಬ್ಬೇಪುರ-ಕುಲಗಾಣ-ಮಲೆಯೂರು-ಹರವೆ-ನಂಜೇದೇವನಪುರ ರಸ್ತೆ ಸ.23.30 ನಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಲೆಕ್ಕಶೀರ್ಷಿಕೆ 5054-80-190-0-01-132 ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದಿಂದ 3 ಕೋಟಿ ಬಿಡುಗಡೆಯಾಗಿದೆ. ಇಂದು ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದು, ಒಂದು ಉತ್ತಮ ರಸ್ತೆ, ಸೇತುವೆ ಇದಾಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಕೆರೆಹಳ್ಳಿನವೀನ್, ತಾ.ಪಂ.ಮಾಜಿ ಸದಸ್ಯ ಉದಯಕುಮಾರ್, ಎಇಇ ಶಾಂತಮ್ಮ, ಸಹಾಯಕ ಇಂಜಿನಿಯರ್ ರಾದ ರೇವಣ್ಣ, ಕೃಷ್ಣಮೂರ್ತಿ,ಗುತ್ತಿಗೆದಾರ ಸಂತೋಷಕುಮಾರ್,ಮುಖಂಡರಾದ ಬೆಳ್ಳೇಗೌಡ, ,
ಕೆರೆಹಳ್ಳಿ ರೇವಣ್ಣ, ಗುರುಸಿದ್ಧೇಗೌಡ, ಮಲೆಯೂರುನಾಗರಾಜು, ಹರವೆ ರಂಗಸ್ವಾಮಿನಾಯಕ, ರೇವಪ್ಪ, ನಾಗೇಶ್, ಅರಳಿಕಟ್ಟೆ ಬಸಪ್ಪ, ಪ್ರವೀಣ, ಮಂಜು, ಮಹದೇವಸ್ವಾಮಿ, ಹರೀಶ್ ಕೆಬ್ಬೇಪುರ ಇತರರು ಹಾಜರಿದ್ದರು.