ಉಡಿಗಾಲ ಆನೆ ಮಡುವಿನ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಪ್ರತಿಭಟನೆ

  • ಕೆರೆಗೆ ನೀರು ತುಂಬಿಸಿ ಇಲ್ಲವೇ ವಿಷಕೊಡಿ:ಗುರುಪ್ರಸಾದ್
  • ಸ್ಥಳಕ್ಕೆ ಭೇಟಿ ನೀಡಿದ ಎಇಇ ಮಹೇಶ್ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು

ಚಾಮರಾಜನಗರ: ತಾಲೂಕಿನ ಉಡಿಗಾಲ ಆನೆಮಡುವಿನ ಕೆರೆಗೆ  ಚಿಕ್ಕಮೋರಿ ಕಾಲುವೆ ಮುಖಾಂತರ ಎರಡನೇ ಹಂತದಲ್ಲಿ ನೀರು  
ತುಂಬಿಸುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಉಡಿಗಾಲ ರೈತರು, ಗ್ರಾಮಸ್ಥರು ಗ್ರಾಮದ ಚಿಕ್ಕಮೋರಿ ಕಾಲುವೆ ಸಮೀಪದಲ್ಲಿ ಪ್ರತಿಭಟನೆ ನಡೆಸಿದರು.

ಕೆಲಹೊತ್ತು ಚಾಮರಾಜನಗರ- ಗುಂಡ್ಲುಪೇಟೆ ರಸ್ತೆತಡೆ ನಡೆಸಿದರು. ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಅಧಿಕಾರಿಗಳು, ಇಂಜಿನಿಯರ್ ಗಳ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ರೈತ ಗುರುಪ್ರಸಾದ್ ಮಾತನಾಡಿ, ಆನೆಮಡುವಿನ ಕೆರೆಗೆ ನೀರು ತುಂಬಿಸುವಂತೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ .ಕೆರೆ ನೀರು ತುಂಬಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಾಗಿ ವಿಫಲವಾಗಿದ್ದಾರೆ. ಕೆರೆ ನೀರು ತುಂಬಿ ಇಲ್ಲವೇ ವಿಷಕೊಡಿಸಿ ಇಂಜಿನಿಯರ್, ಪೋಲಿಸರನ್ನು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಎಇಇ ಮಹೇಶ್ ಅವರನ್ನು  ಕೆರೆ ನೀರು ತುಂಬಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಾಗ  ಕೆರೆ ನೀರು ತುಂಬಿಸುವ ಅಧಿಕಾರ ನನಗಿಲ್ಲ ಎಂದು ಹೇಳಿದಾಗ ಪ್ರತಿಭಟನಾಕಾರರು ನಿಮಗೆ ಅಧಿಕಾರಿ ಇಲ್ಲವೆಂದ ಮೇಲೆ ನೀವ್ಯಾಕೆ ಬಂದಿದ್ದೀರಿ. ಇಇ ಕರೆಸುವಂತೆ
ತರಾಟೆಗೆ ತೆಗೆದುಕೊಂಡರು. ಎಇಇ ಮಹೇಶ್ ನಿರಂತರವಾಗಿ ಇಇ ಪೋನ್ ಮಾಡಿದರು ಇಇ ಕರೆ ಸ್ವೀಕರಿಸದಿರುವುದನ್ನು ಗಮನಿಸಿದ ರೈತರು ಇಂಜಿನಿಯರ್ ವಿರುದ್ದ ಘೋಷಣೆ ಕೂಗಿ ಕೆರೆಗೆ ನೀರು ತುಂಬಿ ಇಲ್ಲವೇ ವಿಷಕೊಡಿ ಎಂದು ಒತ್ತಾಯಿಸಿ ಪಟ್ಡು ಹಿಡಿದಾಗ ಡಿವೈಎಸ್ ಪಿ ಸ್ನೇಹರಾಜು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮುಂದಾದಾಗ ಮೇಡ0 ನೀವು ಕೆರೆ ನೀರು ತುಂಬಿಸುವ ಜವಾಬ್ದಾರಿ ತೆಗೆದುಕೊಳ್ಳಿ ನಾವು ಪ್ರತಿಭಟನೆ ಕೈ ಬಿಡುವುದಾಗಿ ಪ್ರತಿಭಟನಾಕಾರರು ಹೇಳಿದರು. ಕೆರೆಗೆ ನೀರು ಬಿಡುವುದಾಗಿ ಎಇಇ ಮಹೇಶ್ ಒಪ್ಪಿಕೊಂಡ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.

ಆನೆ ಮಡುವಿನ ಕೆರೆಗೆ 3 ತಿಂಗಳ ಕಾಲ ರಾಜ್ಯ ರೈತ ಸಂಘಟನೆಗಳು ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಗ್ರಾಮಸ್ಥರು ಆಹೋರಾತ್ರಿ ನಿರಂತರ ಚಳುವಳಿ ನಡೆಸಿ ದೊಡ್ಡ ಪ್ರಮಾಣದ ಪೈಪನ್ನು ರೈತರ ಅನುಕೂಲಕ್ಕಾಗಿ  ಅಳವಡಿಸಲಾಗಿತ್ತು ಆದರೆ 2ನೇ ಹಂತದಲ್ಲಿ ನೀರು ಬಿಟ್ಟು ಕೆರೆ ತುಂಬಿಸಬೇಕಾಗಿತ್ತು ಸ್ವಲ್ಪ ಪ್ರಮಾಣದಲ್ಲಿ ನೀರು ತುಂಬಿಸಿ 3ನೇ ಹಂತಕ್ಕೆ ಬಿಟ್ಟಿದ್ದು  ನೀರು 20% ಅಷ್ಟು ಮಾತ್ರ ನೀರು ತುಂಬಿದ್ದು ಆದರೂ 60%ರಿಂದ 70 % ನೀರು ತುಂಬಿದ್ದೆ ಎಂದು ಅಧಿಕಾರಿಗಳು ಸಮಜಾಯಿಸಿ ರೈತರ ಕಣ್ಣಿಗೆ  ಮಣ್ಣೆರ
ಚುವ ಕೆಲಸ ಮಾಡುತ್ತಿದ್ದಾರೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ  ಗುರುಪ್ರಸಾದ್, ರಘು, ಗುರು, ಸೂರ್ಯ, ರಾಜು, ಕುಮಾರ್, ಅಭಿ, ರೇವಣ್ಣ, ಮಹೇಶ್, ಮಾದೇಶ್, ಮಲ್ಲಿಕ್, ಉಡಿಗಾಲ,ವೀರನಪುರ ಹಾಗೂ ಸುತ್ತ ಮುತ್ತಲಿನ ರೈತರು, ಗ್ರಾಮಸ್ಥರು,  ಭಾಗವಹಿಸಿದ್ದರು.

Leave a Reply

Your email address will not be published. Required fields are marked *