ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ರಾಚನಾಯಕ, ಉಪಾಧ್ಯಕ್ಷರಾಗಿ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಬುಧವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಚನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ನಾಮಪತ್ರ ಸಲ್ಲಿಸಿದರು. ಈ ಸ್ಥಾನಗಳಿಗೆ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಕಾರಿಯಾಗಿದ್ದ ಎಸ್.ನಾಗೇಶ್ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಘೋಷಿಸಿದರು.
ಸಭೆಯಲ್ಲಿ ನಿರ್ದೇಶಕರಾದ ಡಿ.ರಂಗಸ್ವಾಮಿನಾಯಕ, ಕೃಷ್ಣನಾಯಕ, ನಂಜುಂಡನಾಯಕ, ಹನುಮನಾಯಕ, ತೋರಂಗನಾಯಕ, ಜಯಮ್ಮ, ರಾಜಣ್ಣ, ರಂಗಸ್ವಾಮಿನಾಯಕ, ಸಹಾಯಕ ಚುನಾವಣಾಧಿಕಾರಿ ಕೀರ್ತಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಕುಮಾರ್, ಸಹಾಯಕ ನಾಗೇಂದ್ರ ಭಾಗವಹಿಸಿದ್ದರು.
ಸನ್ಮಾನ : ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ನಿರ್ದೇಶಕರು, ಗ್ರಾಮದ ಎಲ್ಲ ಕೋಮಿನ ಯಜಮಾನರು, ಮುಖಂಡರು ಸನ್ಮಾನಿಸಿದರು.