ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮದಲ್ಲೇ   ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸುವಂತೆ ಡಿಡಿಪಿಐಗೆ ಮನವಿ

 ಚಾಮರಾಜನಗರ: ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಆಯಾಯ ಗ್ರಾಮಗಳಲ್ಲೇ ಗಣತಿ ಕಾರ್ಯಕ್ಕೆ ನಿಯೋಜಿಸುವಂತೆ ಒತ್ತಾಯಿಸಿ  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ  ಚಂದ್ರಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
  ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ದೂರದ ಗ್ರಾಮಗಳ ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಿರುವುದರಿಂದ ತುಂಬಾ ತೊಂದರೆ ಉಂಟಾಗಿದೆ ಆಗಾಗಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಗಳಲ್ಲೆ ಗಣತಿ ಕಾರ್ಯಕ್ಕೆ ನಿಯೋಜಿಸಿಕೊಡುವಂತೆ  ಉಪನಿರ್ದೇಶಕರಿಗೆ ಸಲ್ಲಿಸಿರುವ ಮನವಿಯಲ್ಲಿ  ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ, ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ   ಮನವಿ ಮಾಡಿದ್ದಾರೆ
ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ಎನ್.ಸುಧಾ, ಪದಾಧಿಕಾರಿಗಳಾದ  ಎಂ.ಡಿ ಮಹಾದೇವಯ್ಯ ಡಿ ಎನ್. ಭಾರತ್ , ಬಿ. ಕೃಷ್ಣಮೂರ್ತಿ ,ರಾಜು ,ಎಸ್ ಜಿ ವಿ ಶಾಂತರಾಜ್, ಶಿವಕುಮಾರ್ , ಎಸ್.ಬಿ ರಾಜು ,  ಸಮೀಉಲ್ಲಾ, ಧನಂಜಯ್,  ಎಂ.ಪುಟ್ಟಸ್ವಾಮಿ, ಸಿ.ಎಂ.ಮುರುಗೇಶ್ ಕುಮಾರ್, ನಂಜುಂಡಸ್ವಾಮಿ, ಎನ್.ಎಸ್.ಮಹಾದೇವಸ್ವಾಮಿ, ಎಂ.ಶಿವಕುಮಾರ್, ಪಿ.ಪುಟ್ಟಸ್ವಾಮಿ, ರಾಜು,
ಭವಾನಿ ದೇವಿ,  ಸಿ.ಎಂ.ಸುಶೀಲಾ, ಶ್ವೇತ,  ಬಿ.ಎಸ್.ಲತಾ,  ಇತರರು ಹಾಜರಿದ್ದರು.

Leave a Reply

Your email address will not be published. Required fields are marked *