ಇತಿಹಾಸವನ್ನು ಸಮಗ್ರವಾಗಿ ತಿಳಿಸುವ ಸಂಶೋಧನೆಗಳು ಹೆಚ್ಚಾಗಬೇಕು : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಗೋಚರವಾಗಿ ದೇಶಕ್ಕೆ ಹೋರಾಟ ಮಾಡಿರುವ ಕ್ರಾಂತಿಕಾರಿಗಳ ಜೀವನ ಚರಿತ್ರೆಯನ್ನು ಯುವ ಸಮುದಾಯಕ್ಕೆ ತಿಳಿಸುವ ಜಾಗೃತಿಯ ಕಾರ್ಯ ಆಗಬೇಕಿದೆ. ವಿವಿಧ ಕಡೆ ತಮ್ಮದೇ ಆದ ಹೋರಾಟದ ಮೂಲಕ ತ್ಯಾಗ ಬಲಿದಾನಗೊಂಡ ಸ್ವಾತಂತ್ರ್ಯ ಕ್ರಾಂತಿಕಾರಿಗಳನ್ನು ಗೌರವಿಸುವ ಕಾರ್ಯವನ್ನು ಮಾಡುವ ಜೊತೆಗೆ ಇತಿಹಾಸವನ್ನು ಸಮಗ್ರವಾಗಿ ತಿಳಿಸುವ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಭಾರತದ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ ಹುಬಾರ್ ಮಂಜ ಬೈದ್ಯ ರವರ ಕೊಡುಗೆಗಳ ಕುರಿತು ಮಾತನಾಡುತ್ತಾ ಉಬರ್ ಮಂಜ ಬೈದ್ಯರವರು ಬ್ರಿಟಿಷರ ದೌರ್ಜನ್ಯ ಶೋಷಣೆ ನಿರಂತರವಾದ ದಬ್ಬಾಳಿಕೆಯನ್ನು ವಿರೋಧಿಸಿ ತಮ್ಮ ಖಜಾನೆಯ ಹುದ್ದೆಗೆ ರಾಜೀನಾಮೆ ನೀಡಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ಮಂಜ ಬೈದ್ಯರವರು ಉಪ್ಪಿನಂಗಡಿ ಗ್ರಾಮದವರು.

1857ರ ಪ್ರಥಮ ಸ್ವಾತಂತ್ರಕ್ಕೆ ಮೊದಲೇ 1837 ರಲ್ಲಿ ಬ್ರಿಟಿಷರನ್ನು ತುಳುನಾಡಿನಲ್ಲಿ ಕಟ್ಟಿಹಾಕುವ ಮೂಲಕ ಭಾರತದ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರರ ಹೋರಾಟದ ದಿಕ್ಕನ್ನು ಬದಲಿಸಿದವರು. ಖಜಾನೆಯ ಹಣ ಚಿನ್ನ ವನ್ನು ಪಡೆದು ಮತ್ತೊಬ್ಬ ಕ್ರಾಂತಿಕಾರಿ ಕಲ್ಯಾಣ ಸ್ವಾಮಿಗೆ ತಲುಪಿಸಿ ಅವರ ಮೂಲಕ ಶಸ್ತ್ರಾಸ್ತ್ರ ಹೋರಾಟದ ಕಾರ್ಯನಿರ್ವಹಿಸಿದ ಮಂಜ ಬೈದ್ಯರವರು 13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ ಮಹಾ ಕ್ರಾಂತಿಕಾರಿ.

ತುಳುನಾಡಿನಲ್ಲಿ ಹಾಲೇರಿ ವಂಶಸ್ಥರ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರದ ಧ್ವಜ ಹಾರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂತಿಮವಾಗಿ 1837 ಮೇ 27ರಂದು ಮಂಜ ಬೈದ್ಯರವರನ್ನು ನೇಣುಗಂಬಕ್ಕೆ ಏರಿಸಿದ ಬ್ರಿಟಿಷರ ದೌರ್ಜನ್ಯವನ್ನು ಭಾರತೀಯರು ಮರೆಯಲಾರರು. ಸ್ವಾತಂತ್ರ್ಯ ಚಳುವಳಿಯ ಇತಿಹಾಸ ಅತ್ಯಂತ ಸ್ಪೂರ್ತಿದಾಯಕ.ದೇಶಾಭಿ ಮಾನದ ಹಾಗೂ ಹೋರಾಟದ ಮಾನಸಿಕತೆಯನ್ನು ಹೆಚ್ಚಿಸುವುದಾಗಿದೆ. ಭಾರತದ ವಿವಿಧ ಪ್ರಾಂತ್ಯಗಳಲ್ಲಿ ತಮ್ಮದೇ ಆದ ಹೋರಾಟವನ್ನು ನಡೆಸಿ ಇತಿಹಾಸದ ಭಾಗವಾಗಿರುವ ಸ್ವಾತಂತ್ರ ಪ್ರೇಮಿಗಳ ಸಮಗ್ರ ಇತಿಹಾಸ ಹೊರಬರಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಡಿ. ಮುರುಗೇಶ್ ಉಭಾರ ಮಂಜ ಬೈದ್ಯರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮತ್ತು ಒಂದು ನಿಮಿಷ ಮೌನ ಆಚರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೊರಲಾಯಿತು.

Leave a Reply

Your email address will not be published. Required fields are marked *