ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಉಪ್ಪಾರ ಸಮುದಾಯದ ಮುಖಂಡರಿಂದ ಮನವಿ

ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ನೀಡಬೇಕೆಂದು ಸಮುದಾಯದ ಮುಖಂಡರು ಮನವಿ ಮಾಡಿದರು.
ನಗರದ ಉಪ್ಪಾರ ಸಮುದಾಯ ಭವನದ ಮುಂದೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಭಾವಚಿತ್ರ ಪ್ರದರ್ಶನ ಮಾಡುವ ಮೂಲಕ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್‌ಗೆ ಒತ್ತಾಯ ಮಾಡಿದರು.
ಗಡಿ ಯಜಮಾನರಾದ ಜಯಸ್ವಾಮಿ ಅವರು ಮಾತನಾಡಿ, ಉಪ್ಪಾರ ಸಮಾಜದ ಏಕೈಕ ಶಾಸಕರಾಗಿರುವ ಚಾಮರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ೪ ಬಾರಿಯಿಂದಲೂ ಜಯಭೇರಿ ಬಾರಿಸುವ ಮೂಲಕ ಶಾಸಕ ಸ್ಥಾನವನ್ನು ಅಲಂಕರಿಸುತ್ತಾ ಬಂದಿರುವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ ವರಿಷ್ಠರು ಹಿಂದುಳಿದ ವರ್ಗಗಳ ಕೋಟಾದ ಅಡಿಯಲ್ಲಿ ಅವರಿಗೆ ಉಪಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿದರು.
ಮಂಡಲ ಪಂಚಾಯಿತಿ ಮೂಲಕ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿರುವ ಅವರು, ಜಿಲ್ಲಾ ಪಂಚಾಯಿತಿ ಸದಸ್ಯರು, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಎಂಎಸ್‌ಐಎಲ್ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ನೂರಾರು ಕೋಟಿ ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ.
ಅಪಾರ ರಾಜಕೀಯ ಅನುಭವವಿದ್ದು, ಶಾಸಕ ಸಿ,ಪುಟ್ಟರಂಗಶೆಟ್ಟಿ ಅವರಿಗೆ ಉಪಮುಖ್ಯಮಂತ್ರಿ ಅಥವಾ ಸಚಿವ ಸ್ಥಾನವನ್ನು ನೀಡಲು ಕಾಂಗ್ರೆಸ್ ಪಕ್ಷದ ವರಿಷ್ಠರು ಮುಂದಾಗಬೇಕು ಎಂದು ಒತ್ತಾಯ ಮಾಡಿದರು.
ಉಪ್ಪಾರ ಸಮುದಾಯದ ಮುಖಂಡರಾದ ಮಹದೇವಸ್ವಾಮಿ, ಯಜಮಾನರಾದ ಅಂಕಶೆಟ್ಟಿ, ಮಹದೇವಸ್ವಾಮಿ, ಬಿ.ಸ್ವಾಮಿ, ಬಂಗಾರಶೆಟ್ಟಿ, ಶಿವಕುಮಾರ್, ನಾರಾಯಣ್, ಅಂಕಪ್ಪ, ದ್ವಾರಕೀ ರಾಜೇಂದ್ರ, ಸಿ.ಎಸ್.ನಾಗರಾಜು, ರವಿಭಗೀರಥ, ಮಂಜು, ಅಶ್ವಥ್, ಹಾಜರಿದ್ದರು.

Leave a Reply

Your email address will not be published. Required fields are marked *