ಚಾಮರಾಜನಗರ: ಭಾದ್ರಪದ ಮಾಸದ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ಲೋಕ ಕಲ್ಯಾಣಾರ್ಥ
ನಗರದ ಭ್ರಮರಾಂಬ ಬಡಾವಣೆಯ 4ನೇ ಕ್ರಾಸ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೆ.29 ರಂದು ಸಹಸ್ರ ಮೋದಕ ಹೋಮ ನಡೆಯಲಿದೆ.
ಅಂದು ಮಂಗಳವಾರ ಶ್ರೀ ಮಹಾ ಗಣಪತಿ ಸನ್ನಿಧಿಯಲ್ಲಿ ಬೆಳಿಗ್ಗೆ 9.00 ಗಂಟೆಗೆ ಸಹಸ್ರ ಮೋದಕ ಹೋಮ (1108) ಆರಂಭವಾಗಿ 12.30 ಕ್ಕೆ ಮಹಾ ಪೂರ್ಣಾಹುತಿ, ಮಹಾ ಮಂಗಳಾರತಿ ನೆರವೇರಲಿದೆ. ಸದ್ಭಕ್ತರು ಸಕಾಲಕ್ಕೆ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.
