- ಕುಂಬಾರ ಸಮುದಾಯಕ್ಕೆ ವಿಧಾನಪರಿಷತ್ ಸ್ಥಾನ ನೀಡಲು ವಿರೂಪಾಕ್ಷ ಆಗ್ರಹ
ಚಾಮರಾಜನಗರ: ಜಿಲ್ಲಾ ಕುಂಬಾರರ ಸಂಘದ ವತಿಯಿಂದ ಆ. 22 ರಂದು ನಗರದಲ್ಲಿ ಸರ್ವಜ್ಞ
ಜಯಂತಿ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮದ್ದೂರು ವಿರೂಪಾಕ್ಷ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಶ್ರೀಸುತ್ತೂರು ಕ್ಷೇತ್ರ ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಬೆಳಗಾವಿ ಅಥಣಿ ಕುಂಬಾರರ ಗುರುಪೀಠ ಶ್ರೀಬಸವ ಕುಂಬಾರ ಗುಂಡಯ್ಯಸ್ವಾಮಿ, ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ದಿವ್ಯ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಮದ್ದೂರು ವಿರೂಪಾಕ್ಷ ಅಧ್ಯಕ್ಷತೆ ವಹಿಸುವವರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಶರಣಕುಂಬಾರ ಗುಂಡಯ್ಯರವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡುವವರು, ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಸಂತಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವವರು. ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಸಂವಿಧಾನ ರಚನಾ ಸಮಿತಿ ಸದಸ್ಯರಾದ ಶ್ರೀರತ್ನಪ್ಪ ಕುಂಬಾರರ ಭವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಚಿವರಾದ ಪ್ರೋ.ಎ.ಲಕ್ಷ್ಮೀಸಾಗರ್ ಭಾವಚಿತ್ರಕ್ಕೆ ಕುಂಬಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶ್ರೀನಿವಾನ್‌ವೇಲು ಪುಷ್ಪಾರ್ಚನೆ ಮಡುವವರು. ತಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಾಗಭೂಷಣ್, ವಿಧಾನ ಪರಿಷತ್ ನಿವೃತ್ತ ಕಾರ್ಯದರ್ಶಿ ನಿರ್ಮಲ, ಭಾಗವಹಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಕೆ.ಪುಟ್ಟಸ್ವಾಮಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಲಿದ್ದಾರೆ. ಸಾಹಿತಿ ಶಿವಣ್ಣ ಇಂದುವಾಡಿ ಸರ್ವಜ್ಞರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು. 75 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ’ ನೀ
ಡಿ ಗೌರವಿಸಲಾಗುವುದು. ಅಲ್ಲದೆ ನೆಹರು ಕಾಲದಿಂದಲೂ ಕುಂಬಾರ ಸಮುದಾಯ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿರುವುದರಿಂದ ಸಮುದಾಯದ ಪ್ರಮುಖರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು. ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕುಂಬಾರ
ಕೈಗಾರಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ
ಪಿ.ಎಸ್.ರಾಜೇಂದ್ರ, ಉಪಾಧ್ಯಕ್ಷ ಮಲ್ಲಯ್ಯನಪುರ ಶಿವಣ್ಣಶೆಟ್ಟಿ, ಜಿಲ್ಲಾ ಕುಂಬಾರ ಸಂಘ ಗೌರವಾಧ್ಯಕ್ಷ ನಾಗವಳ್ಳಿ ಚಾಮರಾಜು,
ಉಪಾಧ್ಯಕ್ಷ ರಮೇಶ್ ಹೆಗ್ಗೋಠಾರ, ಕಾರ್ಯದರ್ಶಿಕೊಳ್ಳೇಗಾಲ ಲಿಂಗರಾಜು,
ತಾಳವಾಡಿ ಪಿರ್ಕಾ ರಾಮಚಂದ್ರ, ನಿರ್ದೇಶಕರಾದ
ಮಸಣಾಪುರ ಶ್ರೀನಿವಾಸ, ಕೃಷ್ಣಪ್ಪ ಮಲ್ಲೂಪುರ, ಅಮಚವಾಡಿ ರಾಜಣ್ಣ, ಮಾದಲವಾಡಿ ಮಹದೇವಶೆಟ್ಟಿ ಹಾಜರಿದ್ದರು.
