ಶಂಕರೇಶ್ವರಸ್ವಾಮಿ ಬೆಟ್ಟದ ಪ್ರವೇಶ ದ್ವಾರ ಲೋಕಾರ್ಪಣೆ: ಸಚಿವ ಸಿ.ಪುಟ್ಟರಂಗಶೆಟ್ಟಿ ವಿಶೇಷ ಪೂಜೆ

ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದ ಸಮೀಪದಲ್ಲಿರುವ ಶ್ರೀ ಶಂಕರೇಶ್ವರಸ್ವಾಮಿ ಬೆಟ್ಟದ ಹೆಬ್ಬಾಗಿಲಿನ ನೂತನ ಪ್ರವೇಶ ದ್ವಾರವನ್ನು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯದ್ವಾರದಲ್ಲಿ ಆಯೋಜಿಸಿದ್ದ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಪುಷ್ಪಾರ್ಚನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗಡಿಯಜಮಾನ ಕೃಷ್ಣ, ಮಹದೇವಸ್ವಾಮಿ, ನಾರಾಯಣಸ್ವಾಮಿ, ಗುರುಮಲ್ಲಪ್ಪ, ಮಸಣಶೆಟ್ಟಿ, ದೊರೆಸ್ವಾಮಿ, ಗೌಡಿಕೆ ಮಾದಪ್ಪ, ಚಂದ್ರಪ್ಪ, ನಾಗೇಂದ್ರ, ಮಧು, ವೈ.ಸಿ. ಮಹದೇವಸ್ವಾಮಿ, ಮಂಗಲ ಶಿವಣ್ಣ, ಮಹದೇವಸ್ವಾಮಿ ಸೇರಿದಂತೆ ಮಂಗಲ, ಯಡಿಯೂರು, ಮಹಾಂತಾಳಪುರ, ಹುಲ್ಲೇಪುರ, ಕರಡಿಮೋಳೆ, ಮಂಗಲ ಹೊಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಚಾಮರಾಜನಗರ ತಾಲೂಕಿನ ಯರಗನಹಳ್ಳಿ ಗ್ರಾಮದ ವಿಶ್ವಕರ್ಮ ಜನಾಂಗದ ಬಡಾವಣೆಯಲ್ಲಿ ಆಯೋಜಿಸಿದ್ದ ಶ್ರೀ ಕಾಳಮ್ಮನವರ 23ನೇ ವರ್ಷದ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಕಾಳಮ್ಮ ತಾಯಿಯ ಕೃಪೆಯಿಂದ ನಾಡಿನ ಜನತೆಗೆ ಒಳ್ಳೆಯದಾಗಲಿ. ಉತ್ತಮ ಮಳೆ, ಸಮೃದ್ಧ ಬೆಳೆ ಆಗುವ ಮೂಲಕ ರೈತರು ಸುಖ-ಸಮೃದ್ಧಿಯಿಂದ ಜೀವನ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಯರಗನಹಳ್ಳಿ ಗ್ರಾಮದ ಮುಖಂಡರಾದ ಶಂಭಪ್ಪ, ಗೌಡಿಕೆ ಸಿದ್ದಚಾರಿ, ಗೋವಿಂದಚಾರ್, ಸುಬ್ರಹ್ಮಣ್ಯ, ನಿಂಗೇಗೌಡ ಸೇರಿದಂತೆ ವಿಶ್ವಕರ್ಮ ಜನಾಂಗದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *