ಚಾಮರಾಜನಗರ: ಶ್ರೀ ಭಗೀರಥ ಜಯಂತಿಯನ್ನು ಏಪ್ರಿಲ್ 23ರಂದು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಿ ಮತ್ತೊಂದು ದಿನ ಸಮುದಾಯದವರು ಅದ್ದೂರಿಯಾಗಿ ಆಚರಿಸುವ ಸಂದರ್ಭದಲ್ಲಿ ಸಹಕರಿಸಲು ನಿರ್ಧರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಶ್ರೀ ಭಗೀರಥ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಗಡಿಮನೆ ಯಜಮಾನರು, ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಅಭಿಪ್ರಾಯ ತೀರ್ಮಾನದಂತೆ ಏಪ್ರಿಲ್ 23ರಂದು ಶ್ರೀ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಿ, ಮತ್ತೊಂದು ದಿನ ಅದ್ದೂರಿಯಾಗಿ ಸಮುದಾಯದವರು ಆಚರಿಸುವ ಸಂದರ್ಭದಲ್ಲಿ ಜಿಲ್ಲಾಡಳಿತ ಸಹಕರಿಸಲು ನಿರ್ಧಾರ ಕೈಗೊಳ್ಳಲಾಯಿತು.
ಆರಂಭದಲ್ಲಿಯೇ ಭಗೀರಥ ಜಯಂತಿ ಆಚರಣೆ ಸಂಬಂಧ ಸಮುದಾಯದ ಗಡಿಮನೆ ಯಜಮಾನರು, ಮುಖಂಡರು ಸಲಹೆ ಅಭಿಪ್ರಾಯಗಳನ್ನು ನೀಡಿದರು. ಏಪ್ರಿಲ್ 23ರ ಗಂಗಾ ಸಪ್ತಮಿಯಂದು ಭಗೀರಥ ಜಯಂತಿಯನ್ನು ಸರಳವಾಗಿ ಹಮ್ಮಿಕೊಂಡು ನೆರವೇರಿಸಬೇಕು. ಸಮುದಾಯವು ಮತ್ತೊಂದು ದಿನ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖಂಡರು, ಯಜಮಾನರು ಅಭಿಪ್ರಾಯ ವ್ಯಕ್ತಪಡಿಸಿದರು.
ಭಗೀರಥರು ಹಾಗೂ ಗಡಿಕಟ್ಟೆ ಮಹತ್ವದ ಬಗ್ಗೆ ರಚಿಸಲಾಗಿರುವ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ವಿತರಿಸಬೇಕು. ಹೆಚ್ಚು ಜನರಿಗೆ ಭಗೀರಥರ ಬಗ್ಗೆ ತಿಳಿಸಿಕೊಡುವ ಕಾರ್ಯವಾಗಬೇಕಿದೆ ಎಂದು ಮುಖಂಡರು ಸಭೆಯಲ್ಲಿ ಹೇಳಿದರು.
ಭಗೀರಥ ಪುತ್ಥಳಿ ಕಾಮಗಾರಿ ಸಂಬಂಧ ವಿವರ ಕೇಳಿದ ಮುಖಂಡರಿಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಈಗಾಗಲೇ ಭಗೀರಥ, ಮಹರ್ಷಿ ವಾಲ್ಮೀಕಿ ಮತ್ತು ಕನಕದಾಸರ ಪುತ್ಥಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪುತ್ಥಳಿ ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆಗೆ ಕ್ರಮ ವಹಿಸಲಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ಎಲ್ಲರ ಸಲಹೆ ಅಭಿಪ್ರಾಯದಂತೆ ಏಪ್ರಿಲ್ 23ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಶ್ರೀ ಭಗೀರಥ ಜಯಂತಿ ಆಚರಣೆಗೆ ಸಿದ್ದತೆ ಮಾಡಲಾಗುತ್ತದೆ. ಇದಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಡಿವೈಎಸ್‍ಪಿ ಸ್ನೇಹ ರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಗಡಿಮನೆ ಯಜಮಾನರಾದ ಜಯಸ್ವಾಮಿ, ಕೃಷ್ಣ, ಜಯಸಿದ್ದು, ಸಿ.ಕೆ. ಮಹದೇವಶೆಟ್ಟಿ, ಮುಖಂಡರಾದ ಮಂಗಲ ಶಿವಕುಮಾರ್, ಸಿ.ಎ. ಮಹದೇವಶೆಟ್ಟಿ, ಸಿ.ಎಸ್. ನಾಗರಾಜ, ಸಾಗಡೆ ಕೃಷ್ಣಶೆಟ್ಟಿ, ನೂರೊಂದು ಶೆಟ್ಟಿ, ಎಂ. ಜಯಕುಮಾರ್, ಕಾವೇರಿ ಶಿವಕುಮಾರ್, ಸಿ.ಎಂ. ನರಸಿಂಹಮೂರ್ತಿ, ಜಿ. ಬಂಗಾರು, ಚಾ.ಗು. ನಾಗರಾಜು, ಬ್ಯಾಡಮೂಡ್ಲು ಬಸವಣ್ಣ, ನಾರಾಯಣ, ಇತರೆ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು
Like this:
Like Loading...
Related