ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ : ಡಾ.ಎಂ.ಪ್ರಭು

ಚಾಮರಾಜನಗರ: ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಸಾಹಿತ್ಯ,ಧಾರ್ಮಿಕ ಕಾರ್ಯಕ್ರಮಗಳಿಗೆ ಭಾಗವಹಿಸುವ ಅಭಿರುಚಿ ಬೆಳೆಸಬೇಕು ಎಂದು ಜೆಎಸ್ಎಸ್ ಕಾಲೇಜು ಪ್ರಾಂಶುಪಾಲ ಡಾ ಎಂ ಪ್ರಭು ತಿಳಿಸಿದರು.

ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಸೋಮವಾರ ಚಾಮರಾಜನಗರ ವಿಶ್ವವಿದ್ಯಾಲಯ ಏರ್ಪಡಿಸಿದ ಗುಡ್ಡಗಾಡು ಓಟ ಸ್ಪರ್ಧೆ ಹಾಗೂ ಜಿಲ್ಲಾ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಮಾತನಾಡಿ. ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಂಜೆ ಹಾಗೂ ಬೆಳಗಿನ ಸಂಧರ್ಭದಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸ ಮಾಡಿದರೆ ಜಯ ಖಚಿತ. ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಜೆಎಸ್ಎಸ್ ಶಿಕ್ಷಣ ಸಂಸ್ಥೆ ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆ ವರ ಚಲ್ಲಲು ಸೂಕ್ತ ವೇದಿಕೆ ಕಲ್ಪಿಸಲಾಗಿದೆ ಇದನ್ನು ಉಪಯೋಗಿಸಿಕೊಂಡು ಮುಖ್ಯ ವಾಹಿನಿಗೆ ಬರಬೇಕು ಆವಾಗ ಶಾಲೆಗೆ ಹಾಗೂ ಪೋಷಕರಿಗೆ ಸಂತೋಷವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲ ಸಮಿತಿ ಸದಸ್ಯ ಜಿ ಬಂಗಾರು ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ವೈಯಕ್ತಿಕವಾಗಿ ಕ್ರೀಡಾ ಸಾಮಗ್ರಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜೆಎಸ್ಎಸ್ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಎಸ್ ಉಮೇಶ್ ಮಾತನಾಡಿ. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಚಾಂಪಿಯನ್ಶಿಪ್ ಪ್ರಶಸ್ತಿ ಗಳಿಸಲಾಗಿದೆ. ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಶಟಲ್ ಬ್ಯಾಡ್ಮಿಂಟನ್. ಸ್ಪರ್ಧೆಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಜಯಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಹೇಮಾ ಪ್ರಥಮ ಸ್ಥಾನ, ಪಾರ್ವತಿ ಏನ್ 5ನೇ ಸ್ಥಾನ. ಜಿ ಸೌಂದರ್ಯ 6ನೇ ಸ್ಥಾನ ಗಳಿಸಿದ್ದಾರೆ.

ಬಾಲ್ ಬ್ಯಾಡ್ಮಿಂಟನ್. ಸೋನು, ಗೌರಮ್ಮ ಜ್ಯೋತಿಕಾ, ಸಂಗೀತ ಸಿಎನ್ ಮೇಘನಾ ಟೇಬಲ್ ಟೆನಿಸ್. ಎಸ್ ಸೌಂದರ್ಯ, ಅಕ್ಷತಾ ಸಿ, ನಿಸರ್ಗ ಎನ್ ಶಟಲ್ ಬ್ಯಾಡ್ಮಿಂಟನ್. ನಿಸರ್ಗ ಎನ್. ಸೌಂದರ್ಯ ಎಸ್. ಅಕ್ಷತಾ ಸಿ. ಮಿಶ್ರ ಮಿಸ್ಬಾ. ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.

ಜೆಎಸ್ಎಸ್ ಮಹಿಳಾ ಕಾಲೇಜು ಕ್ರೀಡಾ ಸಮಿತಿ ಸದಸ್ಯರಾದ ಪ್ರೊಫೆಸರ್. ತೇಜಸ್ವಿನಿ. ಬಿ ರಶ್ಮಿ. ಮಮತಾ ಎಂ ಹಾಗೂ ಕಾಲೇಜಿನ ಮುಖ್ಯಸ್ಥರು ಹಾಜರಿದ್ದರು

Leave a Reply

Your email address will not be published. Required fields are marked *