ಚಾಮರಾಜನಗರ: ಬೆಂಗಳೂರು ಅಖಿಲ ಕರ್ನಾಟಕ ವಿಶ್ವಕರ್ಮಮಹಾಸಭಾದ ವತಿಯಿಂದ ಏ.24 ರಿಂದ 26 ರವರೆಗೆ 3 ದಿನಗಳ ಕಾಲ ವಿಶ್ವಕರ್ಮ ವಧು-ವರರ ಅನ್ವೇಷಣಾ ಸಮಾವೇಶ ಹಾಗೂ 3 ನೇ ರಾಜ್ಯ ಮಟ್ಟದ ವಧುವರರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮಮಹಾಸಭಾದ ಚಾಮರಾಜನಗರ ಜಿಲ್ಲಾಧ್ಯಕ್ಷ ಮಂಜುನಾಥಚಾರಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,
ರಾಜ್ಯಾಧ್ಯಕ್ಷ ರಾದ ಕೆ.ಪಿ. ನಂಜುಂಡಿ ವಿಶ್ವಕರ್ಮ ರವರ ಅಧ್ಯಕ್ಷತೆಯಲ್ಲಿ ಪರಮ ಪುಣ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಸವರಾಜು ಕದಲೂರು, ಅಶೋಕ್ ಪುತ್ತರ್ ಹಾಗೂ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ರುವ ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕ
ದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆ ಸಂಜೆ 7ಗಂಟೆಗೆ
ಕಾರ್ಯಕ್ರಮ ನಡೆಯಲಿದೆ ಎಂದರು.
ವಿಧವೆಯರು, ವಿಧುರರು ಮತ್ತು ವಿಚ್ಛೇದಿತರಿಗೂ ಅವಕಾಶ ಇರುತ್ತದೆ. ಆಗಾಗಿ ರಾಜ್ಯಾದ್ಯಂತ ಇರುವ ಜಿಲ್ಲಾ, ತಾಲ್ಲೂಕು ಹೋಬಳಿ , ಗ್ರಾಮಂತರ ಪ್ರದೇಶಗಳಿಂದ ವಿಶ್ವಕರ್ಮ ಸಮುದಾಯ ಬಂಧುಗಳು ತಮ್ಮ ಮಕ್ಕಳ ಭವಿಷ್ಯ ದೃಷ್ಟಿಯಿಂದ ಈ ಕಾರ್ಯಕ್ರಮದಲ್ಲಿ
ಚಾಮರಾಜನಗರ ಜಿಲ್ಲೆಯ ಸಮಾಜ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಆಚಾರ್, ಹರದನಹಳ್ಳಿಯ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯ ಚಾರ್, ಉಪಾಧ್ಯಕ್ಷ ಚನ್ನಚಾರಿ, ಚಂದಕವಾಡಿ ಹೋಬಳಿ ಅಧ್ಯಕ್ಷ ಆರ್.ಕೆಂಪರಾಜು, ಹರವೆ ಹೋಬಳಿ ಅಧ್ಯಕ್ಷ ಟಿ.ಕೆ.ವಾಸು ಹಾಜರಿದ್ದರು